ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ಪಟ್ಟಣದ ಹನ್ಮಾವ್ ಕ್ರಾಸ್‌ ಬಳಿ ಗುಜರಿ ತ್ಯಾಜ್ಯವನ್ನ ಬೇಕಾಬಿಟ್ಟಿಯಾಗಿ ಎಸೆಯಲಾಗಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಸಮಸ್ಯೆ ಆಗುವುದಲ್ಲದೆ ಸಾರ್ವಜನಿಕರಿಗು ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣ ಇದನ್ನ ಖುಲ್ಲಾ ಪಡಿಸುವಂತೆ ಒತ್ತಾಯಿಸಿ ವಿಶ್ವ ಮಾನವ ಹಕ್ಕುಗಳ  ಕುಮಟಾ ತಾಲೂಕ ಘಟಕದ ಸಹಾಯಕ ಕಮಿಷನರ್‌ ಮೂಲಕ ಮನವಿ ಸಲ್ಲಿಸಲಾಯಿತು.

ಹನ್ಮಾವ್ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಪಕ್ಕದಲ್ಲಿ ಭಾರೀ ಪ್ರಮಾಣದಲ್ಲಿ ಗುಜರಿ ರಾಶಿಯನ್ನ ಹಾಕಲಾಗಿದೆ. ಇದು ದಿನ ಹೊಂದಂತೆ ಹೆದ್ದಾರಿಯನ್ನ ಆವರಿಸಿಕೊಳ್ಳುವ ಹಂತಕ್ಕೆ ಬಂದಿದ್ದು,ಇದರಿಂದಾಗಿ ಹೆದ್ದಾರಿಯ ಎರಡು ಬದಿಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ಸಮಸ್ಯೆ ಆಗುತ್ತಿದೆ.‌ ಅಲ್ಲದೆ ಮಳೆಗಾಲ ಆಗಿರುವುದರಿಂದಾಗಿ ಗುಜರಿ ರಾಶಿ ಹಾಕಿರುವುದರಿಂದಾಗಿ ಸೊಳ್ಳೆ ಉತ್ಪತಿಯಾಗುತ್ತಿದ್ದು,ಇದರಿಂದಾಗಿ ಹೆದ್ದಾರಿ ಅಕ್ಕ-ಪಕ್ಕದಲ್ಲಿ ವಾಸವಾಗಿರುವ ಜನತೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಪರಿಸ್ಥಿತಿ ಉಲ್ಬಣಗೊಳ್ಳುವ ಮೊದಲು ಹೆದ್ದಾರಿ ಪಕ್ಕದಲ್ಲಿ ರಾಶಿಯಾಗಿ ಬಿದ್ದಿರುವ ಗುಜರಿಯನ್ನ ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸವಾರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿ ಮೂಲಕ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಹೇಂದ್ರ ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ಕರ್ನಾಟಕ ಪಶ್ಚಿಮ ಬಾಗದ ಮಹಿಳಾ ಅಧ್ಯಕ್ಷರು ಮತ್ತು ಉ ಕ ಜಿಲ್ಲಾ ಕಾನೂನು ಶಲಹೆಗಾರ್ತಿ ಅರ್ಚನಾ ಜಯಪ್ರಕಾಶ್ ಅವರ ಸೂಚನೆ ಮೇರೆಗೆ ಸಾರ್ವಜನಿಕರ ಹಿತಾಸಕ್ತಿಗಾಗಿ ಮನವಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಮಾನವ ಹಕ್ಕುಗಳ ಕುಮಟಾ ತಾಲೂಕ ಘಟಕದ  ಉಪಾಧ್ಯಕ್ಷ ಅಣ್ಣಪ್ಪ ಕುಮಟಾ,ಬಾಲಕೃಷ್ಣ, ಮೂರೂರ ಗ್ರಾ ಪಂ ಸದಸ್ಯರಾದ ಮಂಗಲಾ ಭಟ್, ಶಾಂತರಮ್ ಹೆಗಡೆ, ಸುನೀಲ್‌ ಅಳ್ವೆಕೋಡಿ, ಪುಷ್ಪ ಮೇಡಂ ಪ್ರಕಾಶ್ ಕತಗಲ್, ನಾರಾಯಣ, ಕಾಶಿ, ಜಗದೀಶ ಹೆಬೈಲ್‌ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು.

ಇದನ್ನೂ ಓದಿ: ಐತಿಹಾಸಿಕ ಸಿಂಗದೂರು ಸೇತುವೆ ಲೋಕಾರ್ಪಣೆ