ಬೆಂಗಳೂರು: ಹಿರಿಯ ಕನ್ನಡ ನಟಿ ಬಿ. ಸರೋಜಾದೇವಿ (87) ಸೋಮವಾರ (ಜೂನ್ 14) ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ  ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.’ಅಭಿನಯ ಸರಸ್ವತಿ’ ಎಂದೇ ಖ್ಯಾತರಾದ ಅವರು 6 ದಶಕಗಳ ಕಾಲ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದರು.

1955ರಿಂದ 2020ರ ವರಗೆ‌ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಇವರು 200ಕ್ಕೂ ಹೆಚ್ಚು ಚಿತ್ರದಲ್ಲಿ‌‌ ನಟಿಸಿದ್ದರು. ಇವರ ತಂದೆ‌ ಪೊಲೀಸ್ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ಕನ್ನಡ ಸೇರಿದಂತೆ ತಮಿಳು,ತೆಲಗು ಸೇರಿದಂತೆ ಬಹುಭಾಷ‌ ನಟಿಯಾಗಿ ಅಭಿನಯಿಸಿದ್ದು, ಸರೋಜಾದೇವಿ ನಿಧನಕ್ಕೆ ಕನ್ನಡ‌ ಚಿತ್ರರಂಗದ ಹಿರಿಯ,ಕಿರಿಯ ನಟರು ಸರೋಜಾ‌ದೇವಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಸಿಗಂದೂರು ಸೇತುವೆ ಉದ್ಘಾಟನೆ ಮುಂದೂಡುವಂತೆ ಸಿಎಂ ಸಿದ್ದರಾಮಯ್ಯರಿಂದ ಗಡ್ಕರಿಗೆ ಪತ್ರ