ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ; ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಗಾಳಿ ಸಹಿತ ಮಳೆ ಆಗಿಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಜುಲೈ ೧೪ರಿಂದ ೧೬ರ ತನಕ ವ್ಯಾಪಕ ಮಳೆ ಆಗಲಿದ್ದು,ಕಾರಣ ೪೦-೫೦ ಕಿ.ಮಿ ವೇಗದಲ್ಲಿ ಭಾರೀ ಮಳೆಯಾಗಲಿದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಭಾರೀ ಮಳೆಯಾಗಲಿರುವ ಹಿನ್ನಲೆಯಲ್ಲಿ ಯಾವ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಿದ್ದು, ಇನ್ನೂ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಹಾಗೂ ಫಾಲ್ಸ್‌ಗಳಿಗೆ ತೆರಳಿ ಮೋಜು ಮಸ್ತಿ ಮಾಡದಂತೆ ತಿಳಿಸಲಾಗಿದೆ.
ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಕಡಲ ಅಬ್ಬರ ಕೂಡ ಜೋರಾಗುವ ಸಾಧ್ಯತೆ ಇರುವ ಕಾರಣ ಮೀನುಗಾರರಉ ಎಚ್ಚರಿಕೆಯಿಂದ ಇರುವುದಷ್ಟೆ ಅಲ್ಲದೆ. ನದಿ ಹಾಗೂ ಸಮುದ್ರ ತೀರದಲ್ಲಿ ವಾಸವಾಗಿರುವ ಜನರು ಸಹ ಈ ಮೂರು ದಿನಗಳ ಕಾಲ ಎಚ್ಚರಿಕೆ ವಹಿಸಬೇಕಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ: ಓದಿನ ಮನೆಯಲ್ಲೊಂದಿಷ್ಟು