ಸುದ್ದಿಬಿಂದು ಬ್ಯೂರೋ‌ ವರದಿ
ಗೋಕರ್ಣ: ಇಲ್ಲಿನ ರಾಮತೀರ್ಥ ಗುಡ್ಡದ ಮೇಲೆ ಕಾಡಿನ ಪ್ರದೇಶದೊಳಗೆ ಇರುವ ಗುಹೆಯಲ್ಲಿ ವಾಸವಿದ್ದ ರಷ್ಯಾ ವಿದೇಶಿ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಲಾಗಿದೆ.

ಪ್ರವಾಸಿಗರ ರಕ್ಷಣೆ ದೃಷ್ಟಿಯಿಂದ ಗಸ್ತು ತಿರುಗುವಾಗ, ಗುಡ್ಡದ ತುದಿಯಲ್ಲಿ ಯಾರೋ ಅಪರಿಚಿತರು ಉಳಿದುಕೊಂಡಂತೆ ಕಂಡುಬಂದಿದೆ. ಈ ವೇಳೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ರಷ್ಯಾ ಮೂಲದ ವಿದೇಶಿ ಮಹಿಳೆ , ನಿನಾ ಕುಟಿನಾ ( 40 ವರ್ಷ) ಹಾಗೂ ಆಕೆಯ ಇಬ್ಬರೂ ಮಕ್ಕಳಾದ. ನೀನಾ ಅವರ ಹೆಣ್ಣು ಮಕ್ಕಳಾದ ಕುಮಾರಿ ಪ್ರೆಮಾ( 6) ಹಾಗೂ ಕುಮಾರಿ ಅಮಾ (4 ) ಗುಹೆಯಲ್ಲಿ ವಾಸವಾಗಿದ್ದರು.

ಈ ಬಗ್ಗೆ ಪೊಲೀಸರು ವಿದೇಶಿ ಮಹಿಳೆಯನ್ನು ವಿಚಾರಿಸಿದಾಗ ದೇವರ ಪೂಜೆ, ಧ್ಯಾನ ಮಾಡಲು ಆಸಕ್ತಿಯಿತ್ತು.ಆ ಕಾರಣ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡಿದ್ದೆ. ದೇವರ ಪೂಜೆ ಹಾಗೂ ಧ್ಯಾನ ಮಾಡಿಕೊಂಡಿದ್ದೆ ಎಂದು ಹೇಳಿದ್ದಾಳೆ.‌ಗುಹೆ ಇರುವ ರಾಮತೀರ್ಥ ಗುಡ್ಡವು ಸ್ಲೈಡಿಂಗ್ ಆಗುವ ಅಪಾಯಕಾರಿ ಸ್ಥಳವಾಗಿದ್ದು. ಹಾವು ಮುಂತಾದ ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವ ಅಪಾಯಕಾರಿ ಸ್ಥಳ .‌ಈ ಕಾರಣ ದಿಂದ, ಅಲ್ಲಿನ ವಾಸದ ಅಪಾಯಗಳ ಬಗ್ಗೆ ವಿದೇಶಿ ಮಹಿಳೆಗೆ ತಿಳಿಸಿ, ಮಕ್ಕಳೊಂದಿಗೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸರು ಮನವರಿಕೆ ಮಾಡಿ. ಗುಹೆಯಿಂದ ಕರೆತಂದು ಎನ್. ಜಿ .ಒ . ಶಂಕರ ಪ್ರಸಾದ ಪೌಂಢೇಶನ್ ಗೆ ಸಂಬಂದಿಸಿದ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಬಿಡಲಾಗಿದೆ.

ರಷ್ಯಾದ ನೀನಾ ಆಧ್ಯಾತ್ಮಿಕತೆ ಬಗ್ಗೆ ಹೆಚ್ಚು ಒಲವಿರುವ ಮಹಿಳೆಯಾಗಿದ್ದು, ಭಾರತದಲ್ಲಿಯೇ ಉಳಿಯುವ ಉಧ್ದೇಶದಿಂದ ತನ್ನ ಮಕ್ಕಳ ಪಾಸಪೋರ್ಟ್, ವೀಸಾ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾಳೆ.ಕಾರಣ ಆಕೆಗೆ ಆಪ್ತ ಸಮಾಲೋಚನೆಗೆ ಒಳ ಪಡಿಸಿ ಅಗತ್ಯ ಮಾಹಿತಿ ಪಡೆಯಲು ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿ ಮೂರು ದಿನ ಪ್ರಯತ್ನಿಸಿದರು. ರತ್ನ ಸರಸ್ವತಿ ಸ್ವಾಮೀಜಿ ಮೂಲಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಪ್ರಯತ್ನಿಸಲಾಯಿತು. ಸದ್ಯ ರಷ್ಯಾದ ನೀನಾ ಹಾಗೂ ಆಕೆಯ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಾಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಇಡಲಾಗಿದೆ.

ಇದನ್ನೂ ಓದಿ:ನಿತ್ಯವೂ ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಕೆಎಸ್ಆರ್‌ಟಿಸಿ ಬಸ್ : ಪ್ರಯಾಣಿಕರು ಹೈರಾಣ