ಉಡುಪಿ: ತಾಲೂಕಿನ ಶ್ರೀ ಗೋಪಾಲಕೃಷ್ಣ ಸನ್ನಿಧಿ ಕಲ್ಲಮಠ,ಪುತ್ತಿಗೆ ಇದರ 1.55ಕೋಟಿ ರೂಪಾಯಿಯ ಅಂದಾಜು ವೆಚ್ಚದ ಜೀರ್ಣೋದ್ಧಾರ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಈ ಪುಣ್ಯದ ಕಾರ್ಯಕ್ಕೆ “ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್” ಮುಖಾಂತರ ಪೂಜ್ಯರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ 5 ಲಕ್ಷ ರೂಪಾಯಿಯ ಮೊತ್ತದ ಡಿಡಿಯನ್ನು ಶ್ರೀ ಕಲ್ಲಮಠದ ಜೀರ್ಣೋದ್ಧಾರ ಸಮಿತಿಯವರಿಗೆ ಭಕ್ತಿಪೂರ್ವಕವಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಹರೀಶ್ ಪೂಜಾರಿ ಎಸ್. ರವರು ಎಲ್ಲರನ್ನೂ ಸ್ವಾಗತಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆಯನ್ನು ಮನಃಪೂರ್ವಕವಾಗಿ ಶ್ಲಾಘಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ)ಯ ಉಡುಪಿ ತಾಲೂಕು ಯೋಜನಾಧಿಕಾರಿಯಾದ ಸುರೇಂದ್ರ ನಾಯ್ಕ್ ರವರು ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ದೇವಸ್ಥಾನ, ಭಜನಾ ಮಂದಿರ, ಶಾಲೆ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಿಗೆ ಇಷ್ಟರತನಕ ಕೋಟಿಗಟ್ಟಲೆ ರೂಪಾಯಿಗಳನ್ನು ನೀಡಿರುವುದಲ್ಲದೇ, ಜನರ ಕಷ್ಟ ಸುಖಗಳನ್ನು ಅರಿತು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಕಾರ ಶ್ರೀಕ್ಷೇತ್ರ ನೀಡುವುದನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಪದ್ಮನಾಭ ಭಟ್ ಕಲ್ಲಮಠ, ಗೋಪಾಲಕೃಷ್ಣ ಮಠದ ಪ್ರಧಾನ ಅರ್ಚಕರಾದ ರಘುಪತಿ ಭಟ್,ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್,ಉಡುಪಿ ತಾಲೂಕು ಅಧ್ಯಕ್ಷರಾದ ವಿಜಯ ಶೆಟ್ಟಿ ಕೊಂಡಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳ ಹಿರಿಯಡ್ಕ ವಲಯದ ಅಧ್ಯಕ್ಷರಾದ ಗಣೇಶ್ ನಾಯ್ಕ್, ಹಿರಿಯಡ್ಕ ವಲಯದ ಮೇಲ್ವಿಚಾರಕರಾದ ರಾಜ್, ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟಿನ ಉಪಾಧ್ಯಕ್ಷರಾದ ಪರಿಮಳ ಆಶಾ, ಕೋಶಾಧಿಕಾರಿ ಸುರೇಶ್ ನಾಯ್ಕ್, ಸದಸ್ಯರಾದ ರಾಜು ಶೆಟ್ಟಿ ಕದಿಕೆ,ಭೋಜ ಶೆಟ್ಟಿ ಮಟ್ಟಿಬೈಲು, ಒಕ್ಕೂಟದ ಸೇವಾ ಪ್ರತಿನಿಧಿಯವರಾದ ಪ್ರತಿಮಾ ಮತ್ತು ಯಶೋಧ ಆಚಾರ್ಯ,ತಾಲೂಕು ಭಜನಾ ಪರಿಷತ್ತಿನ ಕೋಶಾಧಿಕಾರಿ ಪೂರ್ಣಿಮಾ, ಭಜನಾ ಪರಿಷತ್ತಿನ ಪೆರ್ಡೂರು ವಲಯ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಾಂಭವಿ ಕುಲಾಲ್, ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮೀ ಹೆಗ್ಡೆ ಹಾಗೂ ಇನ್ನಿತರ ಹಲವು ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ.