ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕಳೆದ ಡಿಸೆಂಬರ್ 27 ರಂದು ನಡೆದ ರೈತರ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಾಡ ಗ್ರಾಮದ ಸಂಘಟನಾ ಚತುರ, ಯುವ ನಾಯಕ ಸಚಿನ್ ನಾಯ್ಕ ಅವರು ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗದ ಅಭ್ಯರ್ಥಿಗಳ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಚಿನ ನಾಯ್ಕ ಅವರು 476 ಮತಗಳನ್ನು ಪಡೆಯುವ ಮೂಲಕ ಮೂರನೇ ಕ್ರಮಾಂಕದಲ್ಲಿ ಆಯ್ಕೆಯಾಗಿದ್ದಾರೆ.ಇನ್ನೂ ಹಿಂದುಳಿದ ವರ್ಗದಲ್ಲಿ ನಾಗರಾಜ ಮುರ್ಕುಂಡಿ ನಾಯ್ಕ 581, ಅರುಣ ಸಿತಾರಾಮ ಗುನಗಾ 488, ಪ್ರಭಾಕರ ಗೋಪಾಲ ನಾಯ್ಕ 464, ದತ್ತಾ ಹನುಮಾ ಪಟಗಾರ 456, ಬಾಬು ಶಿವಪ್ಪ ನಾಯ್ಕ 405 ಮತ ಪಡೆಯುವ ಮೂಲಕ ಆಯ್ಕೆಯಾದರೆ,
ಪರಿಶಿಷ್ಟ ಜಾತಿ ಅಭ್ಯರ್ಥಿಯಾಗಿ ಮಾಸ್ತಿ ಗಣಪು ಹಳ್ಳೇರ ಹಾಗೂ ಪ. ಪಂಗಡದ ಅಭ್ಯರ್ಥಿಯಾಗಿ ವಿಘ್ನೇಶ ಸುಕ್ರು ಗೊಂಡ ಮತ್ತು ಹಿಂದುಳಿದ ‘ಅ’ ವರ್ಗದಲ್ಲಿ ರಾಘವೇಂದ್ರ ಗಣಪಯ್ಯ ನಾಯ್ಕ, ಹಿಂದುಳಿದ ‘ಬ’ ವರ್ಗದಲ್ಲಿ ಶಾಂತರಾಜ ಶಿವಯ್ಯ ನಾಯ್ಕ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಸುಮನಾ ಕೇಶವ ಪಟಗಾರ ಮತ್ತು ನೇತ್ರಾವತಿ ನಾಗರಾಜ ಪಟಗಾರ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಕಟಬಾಕಿದಾರರಿಗೂ ಮತದಾನಕ್ಕೆ ಹಾಗೂ ಚುನಾವಣಾ ಕಣಕ್ಕೆ ಸ್ಪರ್ಧಿಸಲು ಅವಕಾಶ ಕೋರಿ ಕೆಲವರು ನ್ಯಾಯಾಲಯದ ಮೋರೆ ಹೋದ ಪರಿಣಾಮ, ಚುನಾವಣೆ ನಡೆದು ಆರು ತಿಂಗಳ ಬಳಿಕ ನ್ಯಾಯಾಲಯದ ತೀರ್ಪಿನ ಅನುಗುಣ ಜುಲೈ 08 ರಂದು ಮತ ಏಣಿಕೆ ನಡೆಸಲಾಯಿತು. ಚುನಾವಣೆ ಹಾಗೂ ಮತ ಏಣಿಕೆಯ ರಿಟರ್ನಿಂಗ್ ಅಧಿಕಾರಿಯಾಗಿ ನಾಗರಾಜ ಟಿ. ನಾಯ್ಕ ಅವರು ಕಾರ್ಯ ನಿರ್ವಹಿಸಿದರು..
ಇದನ್ನೂ ಓದಿ:ಚೆಕ್ ವಿತರಣೆ ಆಯ್ತು, ಹಣ ಮಾತ್ರ ಬಂದಿಲ್ಲ: ಸಿಬರ್ಡ್ ನಿರಾಶ್ರಿತರಿಗೆ ನಿರಾಶೆ”