ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ತಾಲೂಕಿನ ಕೋನಳ್ಳಿಯ ವನದುರ್ಗಾ ದೇವಾಲಯದ ಪರಿಸರದಲ್ಲಿ ಜುಲೈ 10ರಂದು ಪ್ರಾರಂಭಗೊಳ್ಳಲಿರುವ ಚಾತುರ್ಮಾಸ್ಯ ವೃತಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು ಎಲ್ಲಾ ಔಪಚಾರಿಕತೆ ಕೊನೆ ಹಂತದಲ್ಲಿವೆ.

ಜುಲೈ ೧೦ ಗುರುವಾರ ಬೆಳಿಗ್ಗೆ 10ಗಂಟೆಗೆ ಬ್ರಹ್ಮಾನಂದ ಸ್ವಾಮಿಜೀಗಳು ಪಟ್ಟಣದ ನಾಮಧಾರಿ ಸಭಾಭವನದ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ ರಥದ ಮೂಲಕ ಚಾತುರ್ಮಾಸ್ಯ ವೃತಾಚರಣೆಯ ಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಕುಮಟಾದಿಂದ ಮುಕ್ತ ರಥದಲ್ಲಿ ಸಂಚರಿಸುವ ಅವರನ್ನು ನೂರಾರು ಬೈಕ್ ಮತ್ತು ಲಘು ವಾಹನಗಳು ಹಿಂಬಲಾಸಲಿವೆ. ಸುಮಾರು 10ಸಾವಿರಕ್ಕೂ ಅಧಿಕ ಜನ ಆಸೀನರಾಗಬಹುದಾದ ಬೃಹತ್ ಪೆಂಡಾಲನ್ನು ಕಟ್ಟಲಾಗಿದೆ. ಪ್ರತಿನಿತ್ಯ ಮೂರು ಹೊತ್ತು ಅನ್ನ ಸಂತರ್ಪಣೆ ನಡೆಯಲಿದೆ. ಶುಚಿ ರುಚಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಕುಮಟಾ, ಹೊನ್ನಾವರ ಹಾಗೂ ರಾಜ್ಯ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಚಾತುರ್ಮಾಸ್ಯದ ಮಹತ್ವವನ್ನು ಅರಿತು ಪುಣ್ಯಕ್ಕೆ ಪಾತ್ರರಾಗಲಿದ್ದಾರೆ

ಪ್ರತಿನಿತ್ಯ ಫಲ ಮಂತ್ರಾಕ್ಷತೆ, ಭಜನೆ, ಹವನ, ಗುರುಪೂಜೆ ನಡೆಯಲಿದೆ. ಅಮವಾಸೆ, ಹುಣ್ಣಿಮೆ ಮತ್ತು ಏಕಾದಶಿಯಂದು ಸ್ವಾಮಿಜೀಗಳು ಮೌನಾಚರಣೆ ವಹಿಸಲಿದ್ದಾರೆ. ಭಕ್ತಾದಿಗಳು ಪ್ರವಾಹೋಪಾದಿಯಲ್ಲಿ ಆಗಮಿಸಲಿದ್ದು ಅವರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವೃತಾಚರಣಾ ಸಮಿತಿಯ ಎಚ್ ಆರ್ ನಾಯ್ಕ ತಿಳಿಸಿದ್ದಾರೆ.

ಎಲ್ಲೆಡೆ ತಳಿರು-ತೋರಣ, ಅಲಂಕಾರ ಕಂಗೊಳಿಸುತ್ತಿದ್ದು 42 ದಿನಗಳ ಕಾಲ ವೈಭವ ವಿಜೃಂಭಿಸಲಿದೆ. ಅಲ್ಲದೇ ಲೌಕಿಕ, ಆಧ್ಯಾತ್ಮಿಕ, ಪಾರಮಾರ್ಥಿಕ ವಚನಗಳು ಮೊಳಗಲಿವೆ.

ಇದನ್ನೂ ಓದಿ: ಬಾಡ ರೈತ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಸಚಿನ್ ನಾಯ್ಕ ಆಯ್ಕೆ