ಸುದ್ದಿಬಿಂದು ‌ಬ್ಯೂರೋ ವರದಿ,
ಕಾರವಾರ : ನೌಕಾನೆಲೆ ಯೋಜನೆಯಡಿ ಜಮೀನನ್ನು ಕಳೆದುಕೊಂಡ 57 ಕುಟುಂಬಗಳಿಗೆ ಕಳೆದ ತಿಂಗಳ (ಜೂನ್ ) 21ರಂದು ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಾರು ಹತ್ತು ಕೋಟಿ ರೂಪಾಯಿ ಪರಿಹಾರ ಮೊತ್ತದ ಚೆಕ್ ವಿತರಣೆ ಮಾಡಿದ್ದು,‌ಆದರೆ‌ ಒಂದೇರಡು ಕುಟುಂಬದ ಸದಸ್ಯರ ಖಾತೆಗೆ ಹಣ ಜಮಾ ಆಗಿರುವುದು ಬಿಟ್ಟರೆ ಉಳಿದವರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ಆರೋಪ‌ ಕೇಳಿ ಬರುತ್ತಿದೆ..

ಜೂನ್ 21ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದರು, ಸಚಿವರು ಸರಕಾರದ‌ ಅಧಿಕಾರಿಗಳು ಸೇರಿ ನಿರಾಶ್ರಿತರಿಗೆ ಚೆಕ್‌ ವಿತರಣೆ ಮಾಡಿದ್ದರು. ಚೆಕ್ ವಿತರಣೆ ಮಾಡು ಪೂರ್ವದಲ್ಲಿ ಎಲ್ಲಾ 57 ಕುಟುಂಬದ ಸದಸ್ಯರಿಂದ‌‌ ಎಲ್ಲಾ ದಾಖಲಾತಿ ಪತ್ರಗಳಿಗೆ ಸಹಿ ಪಡೆದು ಬಳಿಕ ಕಾರ್ಯಕ್ರಮದಲ್ಲಿ ಚೆಕ್‌ಗಳನ್ನು ಹಸ್ತಾಂತರ ಮಾಡಲಾಗಿತ್ತು. ಚೆಕ್ ಹಸ್ತಾಂತರವಾದ ,24ಗಂಟೆಯಲ್ಲಿ‌ ಎಲ್ಲರ ಖಾತೆಗೆ ಹಣ ಖಾತೆಗೆ ಹಣ ಜಮಾ ಆಗುತ್ತದೆ, ಮೆಸೇಜ್ ಕೂಡ ಬರುತ್ತದೆ” ಎಂದು ಭರವಸೆ ನೀಡಿದ್ದರು.

ಇನ್ನೂ ಚೆಕ್‌‌ ನೀಡಿ‌ ತಿಂಗಳಾಗತ್ತಾ ಬಂದರು‌‌‌ ಮೆಸೇಜು ಬಂದಿಲ್ಲ‌ ಹಣವೂ ಬಂದಿಲ್ಲವಂತೆ.‌ಕೆಲ‌ ಒಂದೇರಡು ಕುಟುಂಬಕ್ಕೆ ಮಾತ್ರ ಹಣ ಜಮಾ‌ ಆಗಿದೆ ಎನ್ನಲಾಗಿದ್ದು,‌‌ ಇನ್ನೂಳಿದ ಹೆಚ್ಚಿನ ನಿರಾಶ್ರಿತರು ತಮ್ಮ‌ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯಾ ಅಂತಾ ತಿಳಿದುಕೊಳ್ಳೊದಕ್ಕೆ ಬ್ಯಾಂಕ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆದಾಟ ಮುಂದುವರೆದಿದೆ ಎಂದು ನಿರಾಶ್ರಿತರು ಆಡಿಕೊಳ್ಳುತ್ತಿದ್ದಾರೆ.ಈ ಬಗ್ಗೆ ವಿಚಾರಿಸಿದರೆ‌ ಈ ಹಿಂದೆ‌ ಇದ್ದ ಅಧಿಕಾರಿ ವರ್ಗಾವಣೆ ಆಗಿದ್ದಾರೆ. ಹೀಗಾಗಿ ವಿಳಂಬವಾಗತ್ತಾ ಇದೆ ಎಂಬ ಉತ್ತರ ಬರುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ಜಿಲ್ಲಾ ಪಂಚಾಯತ ಸಿಇಒ ಈಶ್ವರ ಕಾಂದೂ ವರ್ಗಾವಣೆ