ವೆಂಕ್ಟಪ್ಪ ಎನ್ನುವ ಜಮೀನ್ದಾರನ ಪತ್ನಿ.. ಇವರದು ಆ ಊರಿನಲ್ಲಿ ಗೌರವಾನ್ವಿತ ಮನೆತನ ಗಂಡ ವೆಂಕ್ಟಪ್ಪನೋ ಹತ್ತು ಹದಿನೈದು ಎಕರೆ ತೆಂಗಿನ ತೋಟದ ಮಾಲೀಕ ತೋಟದ ನಿರ್ವಹಣೆಯಲ್ಲೇ ಹೆಚ್ಚು ಆದಾಯ ಬರುತಿತ್ತು….ಮನೆಗೆಲಸ ಮತ್ತು ಖರ್ಚು ವೆಚ್ಚ ಗಳ ಹೊಣೆ ಸುಬ್ಬಮ್ಮನದೇ ಆಗಿತ್ತು, ಊರಿನ ಯಾವುದೇ ತಕರಾರು ವ್ಯಾಜ್ಯಗಳನ್ನ ಅವರ ಮನೆಯಲ್ಲೇ ಪರಿಹರಿಸುತ್ತಿದುಂಟು….ವೆಂಕ್ಟಪ್ಪ ಅಪ್ಪಟ ಚಿನ್ನ ಯಾವುದೇ ಚಟ ಹೊಂದಿರದ ಮನುಷ್ಯ ಪರೋಪಕಾರದಲ್ಲೂ ಎತ್ತಿದಕೈ
ತಂದೆಯಿಂದ ಬಳುವಳಿಯಾಗಿ ಬಂದ ತೋಟವನ್ನ ಮಗನಂತೇ ಸಾಕಿದ್ದ ಆತನಿಗೆ ಮದುವೆಯಾಗಿ ದಶಕಗಳೇ ಕಳೆದರೂ ಮಕ್ಕಳಿರಲಿಲ್ಲ..ದೇವರಿಗೆ ಹರಕೆ ಹೊತ್ತಿದ್ದಾಯಿತು ತುಲಾಭಾರ ಉರುಳುಸೇವೆಗಳು ಫಲಪ್ರದವಾಗಲಿಲ್ಲ ಆದರೂ ಆಶ್ಚರ್ಯವೆಂಬಂತೆ ಹಲವು ವರ್ಷಗಳ ನಂತರ ಮಗನೊಬ್ಬನ ಜನನವಾಯಿತು…
ಅವನೇ ಶ್ರೀಧರ.
ಶ್ರೀಧರ ತಂದೆಯಂತೇ ಬುದ್ಧಿವಂತ ಲೆಕ್ಕಾಚಾರಗಳಲ್ಲಿ ನಿಪುಣನಾಗಿದ್ದ
ಒಬ್ಬನೇ ಮಗನಾದ್ದರಿಂದ ಸ್ವಲ್ಪ ಮುದ್ದಿನಿಂದ ಸಾಕಿದ್ದರು ಆ ದಂಪತಿ…ಮಗನನ್ನೂ ತಮ್ಮ ಹಾಗೇ ಕೃಷಿಯಲ್ಲಿ ತೊಡಗಿಸಲು ತಂದೆಗೆ ಇಷ್ಟವಿತ್ತು. ಆದರೆ ಮಗ ಇದನ್ನ ಸುತಾರಾಂ ಒಪ್ಪಲಿಲ್ಲ..ಹತ್ತಿರದ ಸೆಕೆಂಡರಿ ಸ್ಕೂಲ್ ಲಿ 10 ನೇ ತರಗತಿಯನ್ನ ಉತ್ತಮ ದರ್ಜೆಯಲ್ಲಿ ಪಾಸಾದ….ತಂದೆ ತಾಯಿಯ ಖುಷಿ ಹೇಳತೀರದು….. ಪಿಯುಸಿಯಲ್ಲಿಯೂ ಸಹ ತನ್ನ ಪ್ರತಿಭೆ ತೋರಿಸಿದ್ದ ಶ್ರೀಧರ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ..
ಮುಂದೆ ವೆಂಕ್ಟಪ್ಪನ ಎದುರು ಎರಡು ಕವಲು ದಾರಿಗಳು ಎದಿರಾದವು. ಒಂದು ಮಗನನ್ನ ಗಗನ ಕುಸುಮವಾಗಿದ್ದ ಎಂಜಿನಿಯರ್ ಕಲಿಸಲು ಬೆಂಗಳೂರಿಗೆ ಕಳಿಸೋದು ಇಲ್ಲಾ ಇಲ್ಲೇ ವ್ಯವಸಾಯ ವೃತ್ತಿಲಿ ಮುಂದುವರೆಸೋದು…
ವೆಂಕ್ಟಪ್ಪ ಗಟ್ಟಿ ನಿರ್ಧಾರ ತೆಗೆದುಕೊಂಡ ತಾನಂತೂ ಓದಲಿಲ್ಲ ಮಗನನ್ನಾದರೂ ಓದಿಸೋಣ ಎಂದು ಅವರಿವರ ಸಹಾಯದಿಂದ ಎಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡ ಒಲೆಯ ಮೇಲಿನದನ್ನು ತಗೊಂಡು ತಲೆಮೇಲೆ ಇಟ್ಕೊಂಡ ಹಾಗೆ ಆಯ್ತು ವೆಂಕ್ಟಪ್ಪನ ಪರಿಸ್ಥಿತಿ. ಲಕ್ಷಾಂತರ ರೂಪಾಯಿ ಕೊಟ್ಟು ಸೀಟ್ ಪಡೆದಾಯಿತು ….ಕೂಡಿಟ್ಟ ಹಣವೆಲ್ಲಾ ಅದಕ್ಕೇ ಖಾಲಿಯಾಯಿತು ಫೀಸ್ ಗೆ ಏನುಮಮಾಡುವುದೆಂದು ಯೋಚಿಸುವಾಗ ತೆಂಗಿನ ತೋಟ ನೆನಪಾಯಿತು ಮನಸಿಲ್ಲದ ಮನಸಿನೊಂದಿಗೆ ಊರ ಶೆಟ್ಟಿಯೋರ್ವನಿಗೆ ಮಾರಾಟ ಮಾಡಿದರು..
ಮುಂದುವರೆಯುವುದು……
ಇದನ್ನೂ ಓದಿ:ಕಾರವಾರದಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರದ ರೆಂಬೆ ಬಿದ್ದು ಬಾಲಕಿಗೆ ಗಾಯ