ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ (ಉತ್ತರ ಕನ್ನಡ) ಜೋಯಿಡಾ ತಾಲೂಕಿನ ಅನಮೋಡ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಕುಸಿತವಾಗಿರುಬ ಘಟನೆ ನಡೆದಿದೆ.
ಇದು ಗೋವಾ ರಾಜ್ಯವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಆಗಿದ್ದು,ರಸ್ತೆ ಕುಸಿತದ ಪರಿಣಾಮವಾಗಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೋಯಿಡಾ ತಾಲೂಕಿನ ರಾಮನಗರದಿಂದ ಗೋವಾ ರಾಜ್ಯದವರೆಗೆ ಸಾಗುವ ಈ ಮಾರ್ಗದ ಅನಮೋಡ ಘಟ್ಟದಲ್ಲಿ ರಾತ್ರಿ ಬಿರುಕು ಕಾಣಿಸಿಕೊಂಡಿತ್ತು, ಮುಂಜಾನೆ ಸಂಪೂರ್ಣವಾಗಿ ಕುಸಿತವಾಗಿ. ಘಟನೆ ನಡೆದ ಸ್ಥಳಕ್ಕೆ ಗೋವಾ ಮತ್ತು ಕರ್ನಾಟಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸದ್ಯ ರಸ್ತೆಯಲ್ಲಿ ಎಲ್ಲಾ ರೀತಿಯ ಲಘು ಮತ್ತು ಭಾರೀ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ, ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ನೀಡಲಾಗಿದೆ. ಗೋವಾ ಸಂಪರ್ಕಕ್ಕೆ ಪ್ರಮುಖ ಸಂಪರ್ಕ ಮಾರ್ಗವೇ ಕುಸಿದಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯಚರಣೆ ಆರಂಭಿಸಲಾಗಿದೆ.
ಇದನ್ನೂ ಓದಿ:-ನಿಲೇಕಣಿ ರಸ್ತೆಗೆ ಬೇಕಿದೆ ಹೆಲ್ಪ್‌ಲೈನ್,GPSಗೂ ಗೊಂದಲವಾಗತ್ತಿದೆ.