ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾ ಭವನದ ಬಳಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ನಿಮಿತ್ತ ನಿರ್ಮಾಣವಾದ ಕುಟಿರವನ್ನು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.

ಲೋಕಕಲ್ಯಾಣಾರ್ಥ ಮತ್ತು ಧಾರ್ಮಿಕ ಶಕ್ತಿಯನ್ನು ಪ್ರಜ್ವಲಿಸುವ ಸದುದ್ದೇಶದಿಂದ 42 ದಿನಗಳು ನಡೆಯಲಿರುವ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಗಾಗಿ ಶ್ರೀಗಳು ವಾಸ್ಯವ್ಯದ ಭವ್ಯ ಕುಟಿರವನ್ನು ಸಕಲ ಧಾರ್ಮಿಕ ವಿದಿವಿಧಾನಗಳ ಮೂಲಕ 1008 ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ಲೋಕಾರ್ಪಣೆಗೊಳಿಸಿದರು. ಬಳಿಕ ಪಿಠೋಪಕರಣ ಮತ್ತು ಪಾಕ ಶಾಲೆಯ ಶುದ್ಧೀಕರಣವನ್ನು ಅರ್ಚಕರು ನಡೆಸಿಕೊಟ್ಟರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಚಾತುರ್ಮಾಸ್ಯದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಒಗ್ಗಟ್ಟಾಗಿ ದುಡಿಯುವುದರ ಶಕ್ತಿ ಪರಿಚಯವಾಗುತ್ತದೆ. ಧಾರ್ಮಿಕಾಚರಣೆಯ ಮಹತ್ವ ತಿಳಿಯುತ್ತದೆ. ಗುರುಸೇವೆ, ಸತ್ಸಂಗ , ಭಕ್ತಿ ಮಾರ್ಗದ ಮೂಲಕ ದೇವರನ್ನು ಸಾಕ್ಷಾತ್ ಕರಿಸಿಕೊಳ್ಳಲು ಸಹಾಯಕಾರಿಯಾಗುತ್ತದೆ. ಚಾತುರ್ಮಾಸ್ಯದ ಪುಣ್ಯ ಸ್ಥಳದಲ್ಲಿ ದೇವತೆಗಳ ಸಂಚಾರ, ಸಾನಿಧ್ಯ ಪ್ರಾಪವಾಗಿ ಆ ಸ್ಥಳ ಪುಣ್ಯ ಸ್ಥಾನವಾಗಿ ಸಮೃದ್ಧವಾಗುತ್ತದೆ. ಹಾಗಾಗಿ ಎಲ್ಲ ಭಕ್ತರು ಈ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣ್ಯ ಗಳಿಸಿಕೊಳ್ಳುವಂತೆ ಶ್ರೀಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಂಕರ ಅಡಿಗುಂಡಿ ಸ್ವಾಗತಿಸಿದರು. ವಿಶ್ವನಾಥ ನಾಯ್ಕ ಪ್ರಾಸ್ತಾವಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಗೋವಿಂದ ನಾಯ್ಕ ವಂದಿಸಿದರು. ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ ಕೋನಳ್ಳಿ, ಪ್ರಮುಖರಾದ ಸುನೀಲ್ ಸೋನಿ ಕಾರವಾರ, ಭಟ್ಕಳದ ಕೃಷ್ಣ ನಾಯ್ಕ, ಅರುಣ ನಾಯ್ಕ, ಕೋನಳ್ಳಿಯ ಹಿರಿಯರಾದ ರಾಮಯ್ಯ ನಾಯ್ಕ, ರಾಮಪ್ಪ ನಾಯ್ಕ ಹೊನ್ನಾವರ, ನಾಮಧಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ತಾಪಂ ಮಾಜಿ ಸದಸ್ಯ ಬಾಲಕೃಷ್ಣ ನಾಯ್ಕ, ಕೂಜಳ್ಳಿ ಗ್ರಾಪಂ ಉಪಾಧ್ಯಕ್ಷ ಮತ್ತು ಕಾಂಗ್ರೆಸ್ ಯುವ ಮುಖಂಡ ವೈಭವ ನಾಯ್ಕ, ಕಸಾಪ ಅಧ್ಯಕ್ಷ ಪ್ರಮೋದ ನಾಯ್ಕಇತರರು ಇದ್ದರು.

ಇದನ್ನೂ ಓದಿ ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ