• ಸುದ್ದಿಬಿಂದು ಬ್ಯೂರೋ ವರದಿ
    ಕಾರವಾರ: ತಾಲೂಕಿನ ಶ್ರೀಕ್ಷೇತ್ರ ಸಿದ್ದರದ ಶ್ರೀನರಸಿಂಹ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಏಕಾದಶಿಯಂದು ಅಖಂಡ ನಾಮಸಂಕೀರ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜುಲೈ 06ರ ರವಿವಾರದಂದು ಆಷಾಢ ಏಕಾದಶಿಯಾಗಿರುವ ಕಾರಣ ಶ್ರೀನರಸಿಂಹ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಾತಾವರಣದಲ್ಲಿ ನಾಮಸಂಕೀರ್ತನೆ ಕಾರ್ಯಕ್ರಮ ಜರುಗಲಿದೆ. ಆಸ್ತಿಕರು,ದೈವಭಕ್ತರು ಹಾಗೂ ಹಿಂದೂ ಸನಾತನ ಧರ್ಮೀಯರಿಗೆ ಈ ದಿನವು ಪವಿತ್ರವಾಗಿದ್ದು, ಪಥಮ ಏಕಾದಶಿ, ವೈಕುಂಠ ಧ್ವಾರ ತೆರೆಯುವ ದಿನ, ವಾರ್ಕರಿಗಳ ದಿನ ಎಂಬ ನಾನಾ ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ.

ಈ ಧಾರ್ಮಿಕ ಪರ್ವದ ಪ್ರಯುಕ್ತ ಶ್ರೀ ಕ್ಷೇತ್ರ ಸಿದ್ದರದ ಪುರಾತನ ಧ್ವಿಹಸ್ತ ಉಗ್ರನರಸಿಂಹ ಜಾಗೃತ ಕ್ಷೇತ್ರದಲ್ಲಿ ಒಂದು ದಿನದ ಅಹೋರಾತ್ರಿ ನಿರಂತರ ನಾಮಸಂಕೀರ್ತನೆ ನಡೆಯಲಿದೆ. ಸಾರ್ವಜನಿಕರು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಈ ಪುಣ್ಯ ಕಾರ್ಯ ಆಯೋಜನೆಗೊಂಡಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ಮರುದಿನ ಬೆಳಿಗ್ಗೆ 6ರವರೆಗೆ ನಿರಂತರ ನಾಮಸಂಕೀರ್ತನೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ, ಭಜನಾ ಮಂಡಳಿಗಳಿಗೆ ಹಾಗೂ ಇತರ ಆಸ್ತಿಕರಿಗೆ ಈ ನಾಮಸಂಕೀರ್ತನೆ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸುವ ಅವಕಾಶ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ:”ಡಿಕೆಶಿ ಸಿಎಂ ಸ್ಥಾನಕ್ಕೆ ಏಳು ಅಡ್ಡಿ : CM ಸ್ಥಾನ ದೂರದ ಕನಸು.?”