ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಮೆಣಸಿ ಗ್ರಾಮದ ಹಲಸಿನಕೊಪ್ಪದಲ್ಲಿ ಸುರಿದ ಭಾರಿ ಮಳೆಯಿಂದ ಮಧುರಾ ಮಾಸ್ತ್ಯ ದೇವಾಡಿಗ ಎಂಬುವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು. ಮನೆಯಿಲ್ಲದೆ ಆ ಕುಟುಂಬ ನಿರಾಶ್ರಿತವಾಗಿದ್ದು ತಾತ್ಕಾಲಿಕ ಆಶ್ರಯಕ್ಕೆ ಪರದಾಡುವಂತಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಬಿಜಿಪಿ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಭೇಟಿ ನೀಡಿ ಕುಟುಂಬದ ಪರಿಸ್ಥಿತಿಯ ನೋಡಿ ನಗದು ಸಹಾಯ ಮತ್ತು ಅಗತ್ಯ ಕಿರಾಣಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, “ಮನೆ ಕುಸಿದು ಎರಡು ದಿನಗಳಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಭೇಟಿ ನೀಡಿ‌ ಪರಿಶೀಲನೆ‌ ನಡೆಸದೆ ನಿರ್ಲಕ್ಷ್ಯ ತೋರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿ ಮನೆ ಕಳೆದುಕೊಂಡ
ಈ ಕುಟುಂಬಕ್ಕೆ ವಾಸಿಸೋದಕ್ಕೆ ತಾತ್ಕಾಲಿಕವಾಗಿ ವಾಸಸ್ಥಳ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಮನೆ ಪುನರ್‌ನಿಮಾಣಕ್ಕೆ ಸರ್ಕಾರದಿಂದ ನೆರವು ದೊರಕುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಇದನ್ನೂ ಓದಿ:-School holiday /ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ