ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಸಹಸ್ರಳ್ಳಿ ಗ್ರಾಮದಲ್ಲಿ ಸುಮಾರು ಒಂದು ವರ್ಷದ ಹಿಂದೆ ಕಾಣೆಯಾಗಿರುವ ವ್ಯಕ್ತಿಯ ಪತ್ತೆಗಾಗಿ ಆತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀಧರ ಈರು ಗೌಡ (53), ಕೂಲಿ ಕೆಲಸ ಮಾಡುವ ವ್ಯಕ್ತಿ, ಸಹಸ್ರಳ್ಳಿ, ಸಿರ್ಸಿಮಕ್ಕಿ ಗ್ರಾಮದ ನಿವಾಸಿಯಾಗಿದ್ದು. ಈತನ ಪತ್ನಿ ಶ್ರೀಮತಿ ಕಮಲಾ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: 2024ರ ಜೂನ್ 21 ರಂದು ಬೆಳಿಗ್ಗೆ 10:30 ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ, ಮನೆಯಲ್ಲಿ ಯಾರು ಇಲ್ಲದ ವೇಳೆ ಶ್ರೀಧರ ಎಲ್ಲಿಗೋ ಮನೆಯಿಂದ ನಾಪತ್ತೆಯಾಗಿದ್ದಾನೆ. ಕಳೆದ ಹಲವು ವರ್ಷಗಳಿಂದ ಶಿರಸಿ, ಹುಬ್ಬಳ್ಳಿ ಅಥವಾ ಬೇರೆ ಊರುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ, ಕೆಲ ತಿಂಗಳುಗಳ ನಂತರ ಮನೆಗೆ ವಾಪಸ್ ಆಗುತ್ತಿದ್ದ. ನಾಪತ್ತೆಯಾಗಿರುವ ಶ್ರೀಧರ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಕಳೆದ ಹತ್ತು ವರ್ಷದಿಂದ ಇದೆ ರೀತಿ ಪರಿಸ್ಥಿತಿ ಎದುರಿಸುತ್ತಿದ್ದ ಎಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿರು ದೂರಿನಲ್ಲಿ ಆತನ ಪತ್ನಿ ತಿಳಿಸಿದ್ದಾಳೆ.
ಇದನ್ನೂ ಓದಿ:200 ರೂಪಾಯಿ ವಂಚನೆ ಪ್ರಕರಣ – 30 ವರ್ಷಗಳ ಬಳಿಕ ಆರೋಪಿ ಬಂಧನ