ಸುದ್ದಿಬಿಂದು ಬ್ಯೂರೋ‌‌ ವರದಿ
ಶಿರಸಿ:ಮೂರು ದಶಕಗಳ ಹಿಂದಿನ ವಂಚನೆ ಪ್ರಕರಣವೊಂದು ಇದೀಗ ನ್ಯಾಯದ ಮೈಲಿಗಲ್ಲು ತಲುಪಿದೆ. ನೌಕರಿ ಕೊಡಿಸುವುದಾಗಿ ಹೇಳಿ ಕೇವಲ 200 ರೂಪಾಯಿ ವಂಚನೆ ಮಾಡಿದ ಆರೋಪಿ, 30 ವರ್ಷಗಳ ಬಳಿಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಬೈಂದೂರಿನ ಬಿ.ಕೆ. ರಾಮಚಂದ್ರರಾವ್ ಎಂಬಾತ 30 ವರ್ಷಗಳ ಹಿಂದೆ ನೌಕರಿಗಾಗಿ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 200ರೂ. ಪಡೆದು ಮೋಸಮಾಡಿದ್ದ. ಪ್ರಕರಣದ ಬಗ್ಗೆ ಆ ಕಾಲದಲ್ಲೇ ಶಿರಸಿ ಗ್ರಾಮೀಣ ಠಾಣೆಯಲ್ಲಿ FIR ದಾಖಲಾಗಿತ್ತು, ಕಾನೂನು ಪ್ರಕ್ರಿಯೆ ಮುಂದುವರೆದರೂ ಆರೋಪಿ ನ್ಯಾಯಾಲಯಕ್ಕೆ ಹಾಜಾರಗದೆ‌ ತಲೆಮರೆಸಿಕೊಂಡಿದ್ದ.

ಇತ್ತೀಚೆಗಷ್ಟೇ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ಎಂ, ಪಿಎಸ್‌ಐ ಸಂತೋಷಕುಮಾರ್ ಎಂ ಮತ್ತು ಅಶೋಕ್ ರಾಠೋಡ್ ನೇತ್ರತ್ವದಲ್ಲಿ ಪೊಲೀಸರು ಬಲೆ ಬೀಸಿ, ಬೆಂಗಳೂರಿನ ಬಳೆಪೇಟೆಯಲ್ಲಿ ಆರೋಪಿ ರಾಮಚಂದ್ರರಾವ್‌ನನ್ನು ಬಂಧಿಸಿದ್ದಾರೆ.

ಪೋಲಿಸ್ ತಂಡದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಪ್ರಮುಖ ಪಾತ್ರ ವಹಿಸಿದ್ದರು. ಬಂಧಿತನನ್ನು ಶಿರಸಿಗೆ ತರಲಾಗಿದ್ದು, ಇದೀಗ ನ್ಯಾಯಾಲಯಕ್ಕೆ‌ ಹಾಜರುಪಡಿಸಲಾಗಿದೆ.

ಇದನ್ನೂ ತಪ್ಪದೆ ಕ್ಲಿಕ್ ‌ಮಾಡಿ ನಿರಂತರ ಸುದ್ದಿ ನೋಡಿ