ಬೆಂಗಳೂರು, : ಚಿನ್ನದ ಖರೀದಿಗೆ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಇಂದು ಮಹತ್ತರವಾದ ಸುದ್ದಿ. ಜೂನ್ 27ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ನಿಟ್ಟುಸಿರು ಬಿಡುವಂತಹ ಸ್ಥಿತಿಯಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ದರಗಳು ಹೀಗಿವೆ:
24 ಕ್ಯಾರೆಟ್ ಚಿನ್ನದ ದರ: ₹9,802 (ಹಿಂದಿನದರಿಂದ ₹93 ಇಳಿಕೆ) 22 ಕ್ಯಾರೆಟ್ ಚಿನ್ನದ ದರ: ₹8,985 (ಹಿಂದಿನದರಿಂದ ₹85 ಇಳಿಕೆ) ಈ ದರ ಇಳಿಕೆಯಿಂದಾಗಿ ಬಂಗಾರ ಖರೀದಿಸಲು ಬಯಸಿದವರಿಗೆ ಈಗ ಉತ್ತಮ ಅವಕಾಶ ಸಿಕ್ಕಂತಾಗಿದೆ.
ಇದನ್ನೂ ಓದಿ : ಡಾ.ಯು.ಚಿತ್ತರಂಜನ್ ಪ್ರಶಸ್ತಿಗೆ ಪತ್ರಕರ್ತ ಗಣೇಶ ಇಟಗಿ ಆಯ್ಕೆ
ಇತರ ನಗರಗಳಲ್ಲಿ ಇಂದಿನ ದರಗಳು: ಹೈದರಾಬಾದ್: 24k: ₹98,020 , 22k: ₹89,850 ದೆಹಲಿ: 24k: ₹98,170, 22k: ₹90,000, ಮುಂಬೈ: ಈ ದರಗಳು ದೆಹಲಿಯಂತೆಯೇ ಸಮಾನವಾಗಿ ಇವೆ.
ಇದನ್ನೂ ಓದಿ: Health Department /ಇಂದು ಆರೋಗ್ಯ ಇಲಾಖೆಯ ವರ್ಗಾವಣೆ ಕೌನ್ಸಿಲಿಂಗ್ ಆರಂಭ