ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ಅರಣ್ಯ ಪ್ರದೇಶದಲ್ಲಿ ವೃದ್ಧ ಮಹಿಳೆ ಓರ್ವಳ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಓರ್ವ ಪಂಚನಾಮೆ ವೇಳೆ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಜೀವ ರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡೇಟು ಹಾಕಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಫೈರೋಜ್ ಯರಗಟ್ಟಿ ಎಂಬಾತನೆ ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕನಾಗಿದ್ದಾನೆ. ಈತ 60 ವರ್ಷದ ಮಹಿಳೆ ಮೇಲೆ ದಾಂಡೇಲಿಯ ಬೈಲಪಾರು ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಬಳಿಕ ಆರೋಪಿಯನ್ನ ಬಂಧಿಸಿದ ಪೊಲೀಸರು. ಸ್ಥಳ ಪರಿಶೀಲನೆಗೆ ಎಂದು ಕರೆದುಕೊಂಡು ಹೋಗುವಾಗ ಆರೋಪಿ ಏಕಾಏಕಿ ಪಿಎಸ್ಐ ಕಿರಣ್ ಪಾಟೀಲ್ (ತನಿಖೆ)ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳ್ಳಿವರಿ ಇಮ್ರಾನ್ ಕಂಬಾರಗಣವಿ ಇವರ ಮೇಲೆ ಕಲ್ಲು – ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಆರೋಪಿ ಯತ್ನಿಸಿದಾಗ ಪಿಎಸ್ಐ ಕಿರಣ್ ಪಾಟೀಲ್ ಆರೋಪಿಯ ಎಡ ಕಾಲಿಗೆ ಗುಂಡು ಹಾರಿಸಿ ಫೈರೋಜನನ್ನು ಬಂಧಿಸಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ಸುದ್ದಿಬಿಂದು ವಾಟ್ಸಾಪ್ ಚಾನಲ್ ಸೇರಿಕೊಳ್ಳಿ,
https://whatsapp.com/channel/0029VaAvVKA47Xe7I9bdgG31
ಗಾಯಾಳು ಪೊಲೀಸ್ ಸಿಬ್ಬಂದಿಗೆ ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫೈರಿಂಗ್ ನಿಂದ ಗಾಯಗೊಂಡಿರುವ ಫೈರೋಜ್ ನನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ ಪಿ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೆ ಒಳಗಾಗಿರುವ ಪೊಲೀಸ್ ಸಿಬ್ಬಂಧಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.ಇನ್ನೂ ಈ ಪ್ರಕರಣದ ಆರೋಪಿ ಫೈರೋಜ್ ರಾಬರಿ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದು ಈತ ರೌಡಿ ಶೀಟರ್ ಎಂದಿದ್ದಾರೆ.
ಸುದ್ದಿಬಿಂದು ಓದುಗರಲ್ಲಿ ವಿನಂತಿ, ತಾವೇಲ್ಲರೂ ಕಳೆದ ಮೂರು ವರ್ಷಗಳಿಂದ ಸುದ್ದಿಬಿಂದು ವೆಬ್ ನ್ಯೂಸ್‌ನ್ನು ಪ್ರೀತಿಯಿಂದ ಸ್ವೀಕರಿಸಿದ್ದಿರಿ. ಸದ್ಯ Broadcastನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಾರಣ ಈ ಲಿಂಕ್ ಮೂಲಕ ವಾಟ್ಸಾಪ್ ಚಾನಲ್ ಸೇರಿಕೊಳ್ಳಬಹುದು..https://whatsapp.com/channel/0029VaAvVKA47Xe7I9bdgG31
ಇದನ್ನೂ ಓದಿ