ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಮಳೆಯ ಪರಿಣಾಮವಾಗಿ ಕಾರವಾರ ಶಿರಸಿ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಿರ್ಜಾನ ಸಮೀಪದ ಬರಗದ್ದೆ ಬಳಿ ಕುಸಿತ ಉಂಟಾಗಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾರವಾರ ಶಿರಸಿ ಸಂಪರ್ಕ ಕಲ್ಪಿಸುವ ಮಿರ್ಜಾನ ಸಮೀಪದ ಬರಗದ್ದೆ ಬಳಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಹೆದ್ದಾರಿ ಕುಸಿತ ಉಂಟಾಗುತ್ತಿರುವುದರಿಂದಾಗಿ ಕಾರವಾರ ಶಿರಸಿ ಸಂಚರಿಸುವ ವಾಹನಗಳನ್ನ ತಡೆಯಲಾಗಿದೆ. ನಿನ್ನೆಯಿಂದಲ್ಲೆ ನಿಧಾನವಾಗಿ ಹೆದ್ದಾರಿ ಬದಿಯಲ್ಲಿ ಕುಸಿತ ಉಂಟಾಗುತ್ತಿದ್ದು, ಇಂದು ಸುರಿದ ಭಾರೀ ಮಳೆಗೆ ಇನ್ನಷ್ಟು ಪ್ರಮಾಣದಲ್ಲಿ ಹೆದ್ದಾರಿ ಕುಸಿತವಾಗಿದೆ.
ಈಗಾಗಲೇ ಇದೆ ಹೆದ್ದಾರಿಯಲ್ಲಿ ದೇವಿಮನೆ ಬಳಿ ಸಣ್ಣ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿದ್ದು, ಕರಾವಳಿ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಭಯದಲ್ಲೆ ಓಡಾಡಬೇಕಾಗಿದೆ.
ಜೆಜೆಎಂ ಅವೈಜ್ಞಾನಿಕ ಕಾಮಗಾರಿ ಹೆದ್ದಾರಿ ಕುಸಿತಕ್ಕೆ ಕಾರಣ
ಕಳೆದ ತಿಂಗಳು ಜಲ ಜೀವನ ಮಷಿನ್ ಅವರು ಗುಡ್ಡದ ತುದಿಯಲ್ಲಿ ಮಣ್ಣು ತೆಗೆದು ಅವೈಜ್ಞಾನಿಕವಾಗಿ ಮಣ್ಣನ್ನು ಮುಚ್ಚದೇ ಹೋಗಿದ್ದು ಈ ಬಗ್ಗೆ ಸ್ಥಳೀಯರು ಹೆದ್ದಾರಿ ಕುಸಿಯುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಮರ್ಪಕವಾಗಿ ಕಾಮಗಾರಿ ಮಾಡದೇ ಇರುವುದೇ ಈ ದುರಂತಕ್ಕೆ ಕಾರಣವಾಗಿದ್ದು ಎಂದು ಗ್ರಾಮಸ್ಥರು ಸುದ್ದಿ ಬಿಂದುಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಅವೈಜ್ಞಾನಿಕ ಕಾಮಗಾರಿ ಮಾಡಿ ಕೋಟಿ ಕೋಟಿ ಲೂಟಿ ಮಾಡಿರುವ ಜೆಜೆಎಂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕಿದೆ ಎನ್ನುವುದು ಸ್ಥಳೀಯ ಒತ್ತಾಯವಾಗಿದೆ.
ಇದನ್ನೂ ಓದಿ
- ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
- ಕುಮಟಾ ಸುತ್ತಮುತ್ತ ಅಕ್ರಮ ಮರಳು ದಂಧೆ : ಸೇತುವೆಗೂ ಅಪಾಯ ಸಾಧ್ಯತೆ
- ಬಾಲ್ಯದಿಂದಲ್ಲೆ ಗುಣಮಟ್ಟದ ಶಿಕ್ಷಣ ಅಗತ್ಯ : ಶಾಸಕ ದಿನಕರ ಶೆಟ್ಟಿ
- ಡಿಕೆ ಶಿವಕುಮಾರ ಅಧಿಕಾರ ಹಸ್ತಾಂತರಕ್ಕೆ ಸಿದ್ದು ಹಿಂದೇಟು ವಿಚಾರ : ಸಿದ್ದರಾಮಯ್ಯ ‘ಕುಮಾರಸ್ವಾಮಿ ಹಾದಿ’ ಹಿಡಿಯಲಿದ್ದಾರ.?
- ಪ್ರವಾಸೋದ್ಯಮ ಕಚೇರಿ ಮಂಚದ ವಿವಾದ: ದಾಖಲೆಯಿಂದ ಸತ್ಯ ಬಯಲು.!


