ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಸರಕು ಹಡಗಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ಬಂದರಿಗೆ ಆಗಮಿಸಿದ್ದ ಪಾಕಿಸ್ತಾನ ಪ್ರಜೆಯನ್ನ ತಡೆದು ಆತನಿಗೆ ಹೊರಗಡೆ ಇಳಿಯದಂತೆ ತಡೆದಿರುವ ಘಟನೆ ಕಾರವಾರ ವಾಣಿಜ್ಯ ಬಂದರಿನಲ್ಲಿ ನಡೆದಿದೆ.
ಎಂಟಿ ಆರ್ ಓಶಿಯನ್ ಹೆಸರಿನ ಹಡಗಿನಲ್ಲಿ ಪಾಕಿಸ್ತಾನ ಪ್ರಜೆ ಕಾರವಾರ ಬಂದರಿಗೆ ಆಗಮಿಸಿದ್ದ, ಹಡಗಿನಲ್ಲಿ ಈತ ಬಂದಿರುವ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಆತನಿಗೆ ಹಡಗಿನಿಂದ ಹೊರಗಡೆ ಇಳಿಯುವುದನ್ನ ತಡೆದಿದ್ದಾರೆ.ಹಡಗಿನ ಕ್ಯಾಪ್ಟನ್ ಮೂಲಕ ಪಾಕಿಸ್ತಾನದ ಪ್ರಜೆಯ ಮೊಬೈಲ್ ಸೀಜ್ ಮಾಡಲಾಗಿದೆ. ಅಲ್ ಜುಬೈರ್ ಇರಾಕ್‌ನಿಂದ ಮೇ 12ಕ್ಕೆ ಬಿಟುಮಿನ್ ತುಂಬಿಕೊಂಡು ಹಡಗು ಕಾರವಾರಕ್ಕೆ ಆಗಮಿಸಿತ್ತು. ಈ ಹಡಗಿನಲ್ಲಿ 15ಭಾರತೀಯರು, 2 ಸಿರಿಯಾ, 1 ಪಾಕಿಸ್ತಾನ ಪ್ರಜೆ ಕೂಡ ಆಗಮಿಸಿದ್ದ, ಪಾಕಿಸ್ತಾನ ಪ್ರಜೆಯ ಬಗ್ಗೆ ಬಂದರು ಇಲಾಖೆಯಿಂದ ಕೋಸ್ಟಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಂದರಿಗೆ ತೆರಳಿದ ಕೋಸ್ಟಲ್ ಪೊಲೀಸರು ಪಾಕಿಸ್ತಾನ ಪ್ರಜೆ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆತನ ಮೊಬೈಲ್ ಸೇರಿದಂತೆ ದಾಖಲೆಗಳನ್ನು ಹಡಗಿನ ಕ್ಯಾಪ್ಟನ್ ಮೂಲಕವೇ ಸೀಜ್ ಮಾಡಿಸಿದ್ದಾರೆ.
ಎರಡು ದಿನಗಳ ಕಾಲ ಬಿಟುಮಿನ್ ಅನ್‌ಲೋಡ್ ಮಾಡಿದ ಬಳಿಕ ಹಡಗು ಇಂದು ಬೆಳಗ್ಗೆ ಕಾರವಾರದಿಂದ ಶಾರ್ಜಾಕ್ಕೆ ತೆರಳಿದೆ. ಪಾಕಿಸ್ತಾನ ಹಾಗೂ ಚೀನಾ ಹಡಗಿಗೆ ಭಾರತೀಯ ಬಂದರಿಗೆ ಬರಲು ಅವಕಾಶವಿಲ್ಲ. ಪಾಕಿಸ್ತಾನ ಪ್ರಜೆ ಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಬಂದರು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ