ಸುದ್ದಿಬಿಂದು ಬ್ಯೂರೋ ವರದಿ
ಸಿದ್ಧಾಪುರ: ಗಡಿಭಾಗದಲ್ಲಿ ನಡೆಯುತ್ತಿರುವ ದಾಳಿ ಹಾಗೂ ‘ಆಪರೇಶನ್ ಸಿಂಧೂರ್’ದ ಹಿನ್ನೆಲೆಯಲ್ಲಿ ದೇಶದಾದ್ಯಾಂತ ಯೋಧರನ್ನು ಸೈನ್ಯಕ್ಕೆ ಹಿಂದಿರುಗಿಸಲು ಕರೆ ನೀಡಲಾಗಿದೆ. ಈ ಕಾರಣದಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಯೋಧ ನೋರ್ವ ಹನಿಮೂನ್ ರದ್ದುಗೊಳಿಸಿ ದೇಶಸೇವೆಗೆ ತೆರಳಿದ್ದಾರೆ.

ಸಿದ್ಧಾಪುರ ತಾಲ್ಲೂಕಿನ ಹೊಸೂರ ಗ್ರಾಮದ ಯೋಧ ಜೈವಂತ್ ವೆಂಕಟೇಶ್ ಅವರು, ಮದುವೆಯಾದ ಹತ್ತು ದಿನದ ಒಳಗೆ ತಮ್ಮ ಹನಿಮೂನ್ ರದ್ದುಗೊಳಿಸಿ ದೇಶಸೇವೆಗೆ ಹೊರಟಿದ್ದಾರೆ. ಮೇ 1 ರಂದು ವಿವಾಹವಾದ ಜೈವಂತ್ ದಂಪತಿ ಹನಿಮೂನ್‌ಗಾಗಿ ಊಟಿಗೆ ತೆರಳಿದ್ದರು. ಆದರೆ ಮೈಸೂರು ಪ್ರವಾಸದ ಮಧ್ಯೆ ಅವರಿಗೆ ಸೇನೆಯಿಂದ ತುರ್ತು ಕರೆ ಬಂದಿದ್ದು, ತಕ್ಷಣವೇ ಹನಿಮೂನ್ ನಿಲ್ಲಿಸಿ ದೇಶ ಸೇವೆಗಾಗಿ ಹೊರಟಿದ್ದಾರೆ.

ಈ ಕುರಿತು ಮಾತನಾಡಿದ ಯೋಧ ಜೈವಂತ್ ಅವರ ಪತ್ನಿ ಪವಿತ್ರಾ ಅವರು, “ಮದುವೆಯಾದ ಬಳಿಕ ಎಲ್ಲಾ ಶಿಷ್ಟಾಚಾರ ಮುಗಿಸಿಕೊಂಡು ನಾವು ಹನಿಮೂನ್‌ಗೆ ಹೊರಟಿದ್ದೆವು. ಅದೇ ವೇಳೆ ಮೈಸೂರಿನಲ್ಲಿ ಇದ್ದಾಗ ಸೇನಾ ಅಧಿಕಾರಿಯಿಂದ ಕರೆಬಂದಿತು. ವಾಟ್ಸಾಪ್‌ನಲ್ಲಿ ಕೂಡ ಸೇನೆಯ ಆದೇಶವಾಯಿತು. ಆಗ ನನ್ನ ಗಂಡು ‘ದೇಶ ಮುಖ್ಯ, ಎಲ್ಲರಿಗೂ ಇಂಥ ಅವಕಾಶ ಸಿಗುವುದಿಲ್ಲ, ನಾನು ದೇಶ ಸೇವೆಗೆ ಹೋಗುತ್ತೇನೆ’ ಎಂದರು. ನನ್ನ ತಂದೆಯೂ ಅದೇ ಮಾತು ಹೇಳಿದರು,” ಎಂದು ಹೇಳಿದರು.

ಇದನ್ನೂ ಓದಿ