ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಾಂಗ್ರೇಸ್ ಸರಕಾರ ಇದ್ದಾಗ ಹಿಂದೂ ಯುವಕರ ಕೊಲೆ ಆಗುತ್ತಿದೆ ಎನ್ನುವ ಬಿಜೆಪಿ ನಾಯಕರು ಅವರ ಸರಕಾರ ಇದ್ದಾಗ ಕೊಲೆಯಾದ ಹಿಂದೂ ಯುವಕರ ಲೆಕ್ಕೆ ಯಾಕೆ ಕೊಟ್ಟಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರನ್ನ ಪ್ರಶನ್ನೆ ಮಾಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ. ನಿಜವಾದ ಹಿಂದೂ ದ್ರೋಹಿಗಳಂದ್ರೆ ಅದು ಬಿಜೆಪಿಯವರು, ಇಲ್ಲದಕ್ಕೆಲ್ಲಾ ಬಂದು ಹಿಂದುತ್ವ ಹಿಂದುತ್ವ ಅಂತಾರೆ, ಆ ಚಾಳಿ ಬಿಡಬೇಕು, ಬಿಜೆಪಿಯವರಿಗೆ ಅದೊಂದು ರೋಗ ಎಂದು

ಮಂಗಳೂರು ಮರ್ಡರ್ ಸಂಬಂಧಿಸಿ ಚಿಕ್ಕಮಗಳೂರು ಮೂಲದ ಕೊಲೆ ಆರೋಪಿಗಳನ್ನು ಹಿಡಿದು ಸರಕಾರ ಈಗಾಗಲೇ ತನಿಖೆ ನಡೆಸ್ತಿದೆ. ಕಾನೂನು ಇದ್ದಾಗ ತಪ್ಪಿತಸ್ಥರಿಗೆ ಕಾನೂನು ಬದ್ಧವಾಗಿ ಶಿಕ್ಷೆ ನೀಡ್ತೇವೆ, ಅವರು ಎಲ್ಲದಕ್ಕೂ ಟೀಕೆ ಟಿಪ್ಪಣಿ ಮಾಡ್ತಾರೆ.

ಜನಿವಾರ, ತಾಳಿ ಅಂತಾ ಟೀಕಾ ಟಿಪ್ಪಣಿ ಮಾಡಿದ್ರು, ಘಟನೆಯನ್ನು ನಾವು ವಿರೋಧಿಸಿದ್ದೇವೆ. ಬಿಜೆಪಿಯವರು ಪರೀಕ್ಷೆಗೆ ಕಾನೂನು ಮಾಡಿದ್ರು, ನಾವು ಕಾನೂನು ಮಾಡಿಲ್ಲ, ಅವರು ಕಾನೂನು ಮಾಡಿ ವಾಪಾಸ್ ತೆಗೋತಾರೆ.‌ ಕಾಂಗ್ರೆಸ್ ಸರಕಾರವಿದ್ದಾಗ ಹೆಚ್ಚಿನ ಹಿಂದೂಗಳು ಹತ್ಯೆಯಾಗ್ತಿದ್ದಾರೆಂದು ಬಿಜೆಪಿಯವರು ಆರೋಪ ಮಾಡತ್ತಾ ಇದ್ದಾರಲ್ಲ.‌ ಅವರ ಸರಕಾರದಲ್ಲಿದ್ದಾಗ ಸತ್ತಿರುವವ ಲೆಕ್ಕಾ ಕೊಟ್ಟಿದ್ದಾರ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದರು.

ನಾವೇನು ಬಿಜೆಪಿಯವರಿದ್ದಾಗ ಹಿಂದೂಗಳು ಮುಸ್ಲಿಮರು ಅಂತಾ ಲೆಕ್ಕ ಮಾಡಿದ್ದೀವಾ. ಒಂದು ಪ್ರಾಣ ಹೋದಾಗ ಅದಕ್ಕೆ ಜಾತಿ ಇರಲ್ಲ, ಹುಟ್ಟಿದಾಗ ಯಾರೂ ಜಾತಿ ಬರ್ಕೊಂಡು ಹುಟ್ಟಲ್ಲ, ಬಿಜೆಪಿಯವರು ಮಾಡ್ಬಹುದೇನೋ.ಪಹಲ್ಗಾಮ್‌ನಲ್ಲಿ ಅಷ್ಟು ಜನರು ಅಮಾಯಕರಿಗೆ ರಕ್ಷಣೆ ನೀಡೋದು ಇವರ ಕರ್ತವ್ಯವಾಗಿತ್ತು. ಅದನ್ನ ಸರಿಯಾ ಮಾಡಲಿಕ್ಕೆ ಆಗದ ಇವರು ಕಾಂಗ್ರೆಸ್ ಬಗ್ಗೆ ಆರೋಪ ಮಾಡತ್ತಾರೆ. ಬಿಜೆಪಿಗರಿಗೆ ಮಾಡೋದಕ್ಕೆ ಕೆಲಸ ಇಲ್ಲ.

ಇದನ್ನೂ ಓದಿ