ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಮ್ಯಾರಾಥಾನ್ ವೇಳೆ ವ್ಯಕ್ತಿ ಓರ್ವ ಕುಸಿದು ಬಿದ್ದಿದ್ದು,ಸ್ಥಳೀಯ ಶಾಸಕ ಸತೀಶ ಸೈಲ್ ಅವರು ಕುಸಿದು ಬಿದ್ದ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾದಕ ವಸ್ತು ನಿಯಂತ್ರಣ ಜಾಗೃತಿಗಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಂದು ಮ್ಯಾರಾಥಾನ್ ಓಟ ನಡೆಸಲಾಗಿತ್ತು. ಮ್ಯಾರಾಥಾನ್ನಲ್ಲಿ ಪಾಲ್ಗೊಂಡಿದ್ದ ನೌಕಾದಳದ ಉದ್ಯೋಗಿ ಗುರುಚರಣ್ ಎಂಬುವವರು ನಗರದ ಮಾಲಾದೇವಿ ಮೈದಾನದ ಬಳಿ ಹೋಗುತ್ತಿರವಾಗ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕ ಸತೀಶ ಸೈಲ್ ಅವರು ತಕ್ಷಣ ವೈದ್ಯರನ್ನ ಕರೆಸಿ ಚಿಕಿತ್ಸೆಗೆ ಸಹಕರಿಸಿದ್ದಾರೆ. ಇದೀಗ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ