ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ: ತಾಲ್ಲೂಕಿನ ಇತಿಹಾಸದಲ್ಲಿ ಅತೀ ದೊಡ್ಡ ಪೊಲೀಸ್ ದಾಳಿ ನಡೆದಿದೆ. ಪೊಲೀಸರು  ಮೀಟರ್ ಬಡ್ಡಿ ನಡೆಸುವವರ ಮೇಲೆ ದಾಳಿ ನಡೆಸಿದ್ದಾರೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವರ ಮನೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ.

ಇನ್ನೂ ಹಲವರು ತಲೆಮರೆಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಆದರೆ, ಈ ರೀತಿ ದಾಳಿ ನಡೆಸಿದವರು  ಮುಂಡಗೋಡಿಯ ಪೊಲೀಸರು ಅಲ್ಲ. ಬದಲಾಗಿ, ಕಾರವಾರದ ಖಡಕ್ ಎಸ್‌ಪಿ ಎಂ. ನಾರಾಯಣ ಸಾಹೇಬರ ನೇತೃತ್ವದಲ್ಲಿ ತಂಡವನ್ನು ರಚಿಸಿ ದಾಳಿ ನಡೆಸಲಾಗಿದೆ..!

50 ವಾಹನಗಳು, ಅಧಿಕಾರಿಗಳು ಹಾಜರ್..!
ಕಾರವಾರ ಸೇರಿದಂತೆ ಜಿಲ್ಲೆಯ ಹಲವಾರು ಠಾಣೆಗಳ CPI, PSI, ASI, ಹಾಗೂ  ಪೊಲೀಸ್ ಕಾನ್ಸ್ಟೇಬಲ್‌ಗಳು ಸೇರಿ ನೂರಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಈ ದಾಳಿ ನಡೆಸಲಾಗಿದೆ. ಇದರಿಂದಾಗಿ ಹಲವರನ್ನು ಬಂಧಿಸಲಾಗಿದೆ, ಆದರೆ ದಾಳಿಯ ಸಂದರ್ಭದಲ್ಲಿ ಬಹುತೇಕ ಮಂದಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ