ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಹೊಲನ ಗದ್ದೆಯ ಖ್ಯಾತ ವೈದ್ಯ ರಾಗಿದ್ದ ಡಾ, ಅನಿಲ ಹೆಗಡೆ (76)ತಮ್ಮ ಮನೆಯಲ್ಲಿಯೇ ಶನಿವಾರ ಬ್ರೇನ್ ಹೇಮರೆಜ್ ದಿಂದ ನಿಧನರಾದರು,
ಅತ್ಯಂತ ಪ್ರತಿಭಾನ್ವಿತ ರಾಗಿದ್ದ ಡಾ, ಹೆಗಡೆ ಹುಬ್ಬಳ್ಳಿ ಯಲ್ಲಿ ಎಂ, ಬಿ. ಬಿ. ಎಸ್ ಪೂರೈಸಿ ಬಾಡದಲ್ಲಿ ಆಸ್ಪತ್ರೆ ತೆರೆದು ಜನರ ಸೇವೆಗೆ ತಮ್ಮನ್ನು ತೊಡಗಿಸಿ ಕೊಂಡರು. ನಂತರ ನೆಲ್ಲೇಕೇರಿಯ bus ನಿಲ್ದಾಣದ ಸಮೀಪ ಆಸ್ಪತ್ರೆ ತೆರೆದು ಅನೇಕರ ಪಾಲಿಗೆ ವೈ ದ್ಯ ದೇವರೇ ಆಗಿದ್ದರು, ಈಗ ಕೆಲವು ವರ್ಷಗಳಿಂದ ನಗರದ ಬಸ್ತಿ ಪೇಟೆಯಲ್ಲಿ ಕುಮಟಾ ನರಸಿಂಗ್ ಹೋಮ್ ಆಸ್ಪತ್ರೆ ಸ್ಥಾಪಿಸಿ ಜನರ ಮೆಚ್ಚುಗೆಗೆ ಪಾತ್ರ ರಾಗಿದ್ದರು, ತಮ್ಮ ಮೂಲ ಮನೆ ಹೊಲನ ಗದ್ದೆಯಲ್ಲೂ ಸಕಿಸ್ತಾಲಯ ತೆರೆದು ಸ್ಥಳೀಯರ ಪಾಲಿನ ಸಂಜೀವಿನಿ ಯಾಗಿದ್ದರು,
ಇಂಗಲೆಂಡ್, ಆಸ್ಟ್ರೇಲಿಯಾ ಇತ್ಯಾದಿ ದೇಶದಲ್ಲಿ ವೈದ್ಯ ರಾಗಿ ಸೇವೆ ಸಲ್ಲಿಸಲು ವಿಪುಲವಾದ ಅವಕಾಶ ಇವರನ್ನು ಹುಡುಕಿ ಬಂದರು ಸಹ ತಮ್ಮ ತಾಲೂಕಿನಲ್ಲಿ ಯೇ ವೈದ್ಯರ ಸಂಖ್ಯೆ ಕಡಿಮೆ ಇರುವದರಿಂದ ಸ್ಥಳೀಯ ಜನರ ಆಶಾಕಿರಣ ವಾಗಿ ಕುಮಟಾದಲ್ಲಿಯೇ ಸೇವೆಸ್ಸಲ್ಲಿಸಲು ನಿರ್ಧಾರ ಮಾಡಿದ್ದು ವಿಶೇಷ ವಾಗಿತ್ತು,
1992 ರಲ್ಲಿ ಗುಡೆ ಅಂಗಡಿ ಹವ್ಯಕ ಸಂಘಟನೆ ಮಾಡಿ ಸೌoಸ್ಥಾಪಕ ಅಧ್ಯಕ್ಷ ರಾಗಿಯೂ ಉನ್ನತ ಸೇವೆ ಮಾಡಿದ್ದರು.
2019 ರಲ್ಲಿ ರೈತ ಸಂಘಟನೆ ಮಾಡಿ ಹೊಳನಗದ್ದೆ ರೈತ ಸಂಘಟನೆ ಕಟ್ಟಿದ್ದರು. ಕೃಷಿಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದು ತಮ್ಮದೇ ಹೊಲದಲ್ಲಿ ಭತ್ತ, ಕಗ್ಗ, ದ್ವಿದಾಳ ಧಾನ್ಯ ಬೆಳೆಯುತ್ತಿದ್ದರು.ಯುವ ಜನರಿಗೆ ಸ್ಫೂರ್ತಿ ಯಾಗಿದ್ದ ಇವರು ತಮ್ಮ ಇಳೆ ವಯಸ್ಸಿನಲ್ಲೂ ನದಿಯಲ್ಲಿ ಈಜುವದು, ಗುಡ್ಡ ಬೆಟ್ಟ ಗಳಲ್ಲಿ ಚಾರಣ ಮಾಡುತ್ತಿದ್ದರು,.
ಪರಿಸರ ಪ್ರಿಯರಾಗಿದ್ದ ಡಾ, ಹೆಗಡೆ ಪರಿಸರದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಿದ್ದರು. ಕಗ್ರಾಸ ಸೂರ್ಯ ಗ್ರಹಣದ ಸಂದರ್ಭದಲ್ಲಿ ಅರಬ್ಬಿ ಸಮುದ್ರ ತೀರಕ್ಕೆ ತೆರಳಿ ಜನರಲ್ಲಿರುವ ಮೂಢ ನಂಬಿಕೆ ಹೋಗಲಾಡಿಸುತ್ತಿದ್ದರು,
ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಸಂಗೀತ ಕಾರ್ಯಕ್ರಮ ದಲ್ಲಿ ಹಾಡುತ್ತಿದ್ದರು. ಹಾರ್ಮೋನಿಯ್ ನುಡಿಸುತ್ತಿದ್ದರು. ದೈವ ಭಕ್ತ ರಾಗಿದ್ದ ಇವರು ಹೆಗಡೆಯ ಶ್ರೀ ಲಕ್ಸ್ಮಿ ನರಸಿಂಹ ದೇವಾಲಯವನ್ನು ಹತ್ತಾರು ಲಕ್ಷ ವೆಚ್ಚ ದಲ್ಲಿ ಜೀರ್ಣದ್ದಾರ ಮಾಡಿಸಿದ್ದರು,
ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತುವನ್ನಾಗಿ ಅವರು ಉನ್ನತ ವಿದ್ಯಾಭ್ಯಾಸ ಪೂರೈಸು ವರೆಗಿನ ಖರ್ಚು ವೆಚ್ಚ ವನ್ನು ಇವರೇ ನೋಡಿಕೊಳ್ಳುತ್ತಿದ್ದರು. ಇವರು ಹವ್ಯಕ ಸಂಘಟನೆ ಅಧ್ಯಕ್ಷ ರಾಗಿದ್ದಾಗ ಕೆಲವರು ಇವರ ಧನ ಸಹಾಯದ ಮೇಲೆ ಇಂಜಿಯಾರಿಂಗ್, ಎಂ ಬಿ ಬಿ ಎಸ್ ಪೂರೈದ್ದರು.
ಜನರೊಂದಿಗೆ ಅತ್ಯಂತ ಆತ್ಮೀಯತೆ ಹೊಂದಿದ್ದ ಇವರು ಸಮಾಜದ ಏಳ್ಗೆ ಗೆ ವಿಶೇಷ ಕೊಡುಗೆ ನೀಡಿದ್ದರು. ಇವರ ನಿಧನ ವು ಸಮಾಜಕ್ಕೆ ತುಂಬಾ ಲಾರದ ನಷ್ಟ ಎಂದು ಹವ್ಯಕ ವಲಯದ ಉಪಾಧ್ಯಕ್ಷರು ಎನ್, ವಿ, ಹೆಗಡೆ, ಕೆನರಾ ಹೆಲ್ತ್ ಕೇರ್ ಸೆಂಟರ್ ಡಾ, ಜಿ. ಜಿ. ಹೆಗಡೆ. ಶಾಸಕ ದಿನಕರ ಶೆಟ್ಟಿ, ಗ್ರಾ. ಪo, ಅಧ್ಯಕ್ಷ ಎಂ, ಎಂ, ಹೆಗಡೆ ಮೊದಲದವರು ಮೃತರ ಆತ್ಮಕ್ಕೆ ಶಾಂತಿ ಕೋರಿ ತಿರ್ವ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ