ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕುಮಟಾ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಬರ್ಗಿ ನಂ. 1ಇವರ ಸಂಯುಕ್ತಾಶ್ರಯದಲ್ಲಿ ನಾಳೆ‌ ಜ.28ರಂದು ಸಂಜೆ 6ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಲಿದೆ.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬರ್ಗಿ ಗ್ರಾಮ ಪಂಚಾಯಯ ಅಧ್ಯಕ್ಷ ಸಂತೋಷ‌ ಎಸ್ ಹರಿಕಾಂತ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್ ಭಟ್ ಅವರು ಹಸ್ತಪತ್ರಿಕೆ ಉದ್ಘಾಟಿಸಲಿದ್ದಾರೆ.

ವಿಶೇಷ ಆಮಂತ್ರಿತರಾಗಿ ,ಪ್ರದೀಪ ಡಿ. ನಾಯಕ, ಮಾಜಿ ಜಿ. ಪಂ. ಸದಸ್ಯರು, ನಿವೇದಿತ ಆಳ್ವ ಕೆ.ಪಿ.ಸಿ.ಸಿ. ಜನರಲ್ ಸೆಕ್ರೆಟರಿ, ಭುವನ ಭಾಗ್ವತ ಅಧ್ಯಕ್ಷರು ಪಿ.ಎಲ್.ಡಿ. ಬ್ಯಾಂಕ್ ಕುಮಟಾ, ಮಂಜುನಾಥ ಎಲ್. ನಾಯ್ಕ, ಉದ್ದಿಮೆದಾರರು, ಕುಮಟಾ,ಸೂರಜ ನಾಯ್ಕ ಸೋನಿ ರಾಜ್ಯ ಕೋರ್ ಸಮಿತಿಯ ಕಾರ್ಯದರ್ಶಿಗಳು, ಭಾಸ್ಕರ ಕೆ. ಪಟಗಾರ ಉದ್ದಿಮೆದಾರರು, ಕ.ರ.ವೇ. ಜಿಲ್ಲಾಧ್ಯಕ್ಷರು, ಸುಧೀರ ಜಿ. ಪಂಡಿತ ಉದ್ದಿಮೆದಾರರು, ಬರ್ಗಿ, ಉಮೇಶ ಗಾಂವಕರ ಉದ್ದಿಮೆದಾರರು,

ಕುಮಾರ ಕೊಲಿನ್ ಬೆಂಗಳೂರು ಕೊಲಿನ್ ಏರೋಸ್ಪೇಸ್, ​​ಬೆಂಗಳೂರು, ವಿಜಯ ಡಿ. ನಾಯಕ ಸಮಾಜ ಸೇವಕಿ, ನವಚೇತನ ಟ್ರಸ್ಟನ ನಿರ್ದೇಶಕರು ವಿಶೇಷ ಅಗತ್ಯವುಳ್ಳ ಮಕ್ಕಳ ವಸತಿ ಶಾಲೆ, ಬೆಂಗಳೂರು, ಕುಮಾರಿ ಶ್ವೇತಾ ಉಮೇಶ ಹರಿಕಂತ್ರ ಎಮ್.ಬಿ.ಎ.ದಲ್ಲಿ ಬಂಗಾರ ಪದಕ ವಿಜೇತೆ, ಶಾಲೆಯ ಹಳೆಯ ವಿದ್ಯಾರ್ಥಿ,ಜಯಾನಂದ ಪಟಗಾರ ನಿವೃತ್ತ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಬರ್ಗಿ ಗ್ರಾಮ ಪಂಚಾಯತ ಗೌರವಾನ್ವಿತ ಸದಸ್ಯರು ಆಗಮಿಸಲಿದ್ದಾರೆ.

ಇನ್ನೂ ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ‌.

ಇದನ್ನೂ ಓದಿ