ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ವಾಲಗಳ್ಳಿ ಪಂಚಾಯತ್ ಗ್ರಂಥಾಲಯ ಕೊಠಡಿ ಚಿಕ್ಕದಾಗಿದ್ದು, ಕುಳಿತುಕೊಳ್ಳಲು ಕಷ್ಟಸಾಧ್ಯವಾಗಿದೆ. ಅಲ್ಲದೆ‌ ಗ್ರಂಥಾಲಯಕ್ಕೆ ಬಂದಿರುವ ಪಿಠೋಪಕರಣಗಳನ್ನ ಒಳಗಡೆ ಇಡಲು ಸಾಧ್ಯವಾಗದೆ. ಗ್ರಾಮ ಪಂಚಾಯತ ವರಾಂಡಲ್ಲಿ ಇಡಲಾಗಿದ್ದು, ಇದರಿಂದಾಗಿ ಶೌಚಾಯಲಯಕ್ಕೆ ದಾರಿ ಇಲ್ಲದಂತಾಗಿದೆ.

ಈಗಾಗಲೇ ಇರುವ ಗ್ರಂಥಾಲಕ್ಕೆ ಹೊಸದಾಗಿ ಟೇಬಲ್ ಹಾಗೂ ಖುರ್ಚಿ ಸಹ ಬಂದಿದೆ‌. ಆದರೆ ಬಂದಿರುವ ಆ ಟೇಬಲ್ ಹಾಗೂ ಖುರ್ಚಿಗಳನ್ನ ಗ್ರಂಥಾಲಯದ ಒಳಗೆ ಇರಿಸಿಲು ಸ್ಥಳವಕಾಶ ಇಲ್ಲದೆ. ಗ್ರಾಮ ಪಂಚಾಯತ ವರಾಂಡದ ಮೇಲೆ ಇಡಲಾಗಿದೆ. ಹೀಗಾಗಿ ವರಾಂಡ ಸಹ ಭರ್ತಿಯಾಗಿದ್ದು ಅಲ್ಲೆ ಪಕ್ಕದಲ್ಲಿರುವ ಶೌಚಾಲಯಕ್ಕೆ ಹೋಗಲು ಸ್ಥಳವಕಾಶ ಇಲ್ಲದಂತಾಗಿದೆ.

ಹೊಸಕಟ್ಟಡಕ್ಕಾಗಿ ಈಗಾಗಲೇ ನಾಲ್ಕು ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ ಅನುಧಾನ ಬಂದು ಎರಡು ತಿಂಗಳಹ ಕಳೆದರು, ತಾ.ಪಂ.‌ ಆಡಳಿತಾತ್ಮಕ ಅನುದಾನ ನೀಡದ ಕಾರಣ ಕಟ್ಟಡ ಕಾಮಗಾರಿಗೆ ಇದುವರೆಗೆ ಚಾಲನೆ ಸಿಕ್ಕಲ್ಲ. ಪಂಚಾಯತ ನಲ್ಲಿ 2023 ಅಕ್ಟೋಬರ್ ಹಾಗೂ ಕಳೆದ ಫೆಬ್ರುವರಿಯಲ್ಲಿ ಗ್ರಂಥಾಲಯ ನೂತನ ಕಟ್ಟಡ ನಿರ್ಮಿಸಲು ಅನುದಾನ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಹಾಗೂ ಪಂಚಾಯತ ಒಡೆತನದ ಸರ್ಕಾರಿ ಜಾಗೆ ಗುರುತಿಸಿ,ಗ್ರಂಥಾಲಯ ಕಟ್ಟಡಕ್ಕೆ ಆರು ಗುಂಟೆ ಸ್ಥಳ ಮೀಸಲಿಡಲಾಗಿದೆ.‌

ಇಕ್ಕಟ್ಟಾದ ಈ ಗ್ರಂಥಾಲಯದಲ್ಲಿ ಕುಳಿದು ಜ್ಞಾನ ಹೆಚ್ಚಿಸಿಕೊಳ್ಳಬೇಕು ಅಂದರೆ ಅದು ಸಾಧ್ಯವಾಗದ ಮಾತು ಹೀಗಾಗಿ ಶೀಘ್ರದಲ್ಲಿ ತಾಲೂಕಾಡಳಿ ಹೊಸದಾಗಿ ಮಂಜೂರಾಗಿರುವ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕಿದೆ.ಎನ್ನುವುದು ಗ್ರಾಮ ಪಂಚಾಯತ ಸದಸ್ಯರು ಒಳಗೊಂಡು ಹೆಚ್ಚಿನ ಗ್ರಾಮಸ್ಥರ ಒತ್ತಾಸೆಯಾಗಿದೆ.ಯಾರೊಬ್ಬರ ಒಳಿತಗಾಗಿ ಆಡಳಿತ ಬೆಂಬಲ‌ ನೀಡುವುದನ್ನ ಬಿಟ್ಟು ಗ್ರಾಮಸ್ಥರ ಒಳಿತಗಾಗಿ ಕಾರ್ಯನಿರ್ವಹಿಸಲಿ ಎನ್ನುವುದೆ ಎಲ್ಲರ ಆಶಯ…

ಗಮನಿಸಿ