ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಬೆಂಗಳೂರಿನಿಂದ ಗೊಕರ್ಣಗೆ ಬರುತ್ತಿದ್ಧ ಪ್ರವಾಸಿಗರ ಬಸ್ ಪಲ್ಟಿಯಾಗಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಹತ್ತಕ್ಕು ಹೆಚ್ಚುಮಂದಿಗೆ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಬಳಿ ನಡೆದಿದೆ
ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದ (AR01 -T -5051)ಬೆನಕ ಟ್ರಾವೇಲ್ಸ್ ಕಂಪನಿಯ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 20 ಮಂದಿ ಪ್ರಯಾಣಿಕರು ಅದರಲ್ಲಿ ಐದು ಮಂದಿಗೆ ಗಂಭೀರವಾಗಿ ಗಾಯವಾಗಿದೆ.ಗಂಭೀರ ಗಾಯಗೊಂಡ 8ಮಂದಿಯನ್ನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಇನ್ನೂ ಸಣ್ಣಪುಟ್ಟ ಗಾಯಗೊಂಡವನ್ನ 108 ಹಾಗೂ ಖಾಸಗಿ ಅಂಬುಲೆನ್ಸ್ ಮೂಲಕ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಘಟನಾ ಸ್ಥಳಕ್ಕೆ ಹೊನ್ನಾವರ ಪಿಎಸ್ಐ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗಮನಿಸಿ
- Road Accident/ಸ್ಕೂಟಿ ಸವಾರನ ತಲೆಯ ಮೇಲೆ ಚಲಿಸಿದ ಬಸ್ ; ಸ್ಥಳದಲ್ಲೇ ಸಾವು
- ರಸ್ತೆ ಬದಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ : ಶಿರಸಿ ತಾಲೂಕಿನ ಖಾನನಗರದಲ್ಲಿ ಅಪರೂಪದ ದೃಶ್ಯ.!
- ಕುಮಟಾ ಎಸಿ ಅವರ ಕಾರಿಗೆ ಡಿಕ್ಕಿ ಹೊಡೆದ ಶ್ರೀಕುಮಾರ ಬಸ್
- ಸಮಾಜ,ಧಾರ್ಮಿಕ ಸಂಘಟನೆಗಾಗಿ ಡಾ. ಡಾ. ವೆಂಕಟೇಶ ನಾಯ್ಕ ನೇಮಕ: ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿ
- ಭಟ್ಕಳದಲ್ಲಿ ವಿಚಿತ್ರ ಹೆಣ್ಣು ಶಿಶು ಜನನ,ಆಸ್ಪತ್ರೆಗೆ ದಾಖಲು