ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರಕನ್ನಡ ಜಿಲ್ಲೆಯ ಜನ ಅದ್ಯಾವ ಜನ್ಮದಲ್ಲಿ ಪಾಪ ಮಾಡೊದ್ದರೋ ಗೊತ್ತಿಲ್ಲ.ಇಲ್ಲಿನ ಜನ ಆರೋಗ್ಯ ವ್ಯವಸ್ಥೆಯಿಂದ ಹಿಡಿದು ಸಾರಿಗೆ ವ್ಯವಸ್ಥೆ ತನಕ ಬೇರೆ ಜಿಲ್ಲೆಯನ್ನ ಅವಲಂಭಿಸಿಕೊಳ್ಳಬೇಕಾದ ದುರ್ದೈವ ಜಿಲ್ಲೆಯ ಜನರದ್ದಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜ್ವರ ಹೊರತು ಪಡಿಸಿ(ಸಾಮಾನ್ಯ ಜ್ವರ)ಉಳಿದ ಪ್ರತಿಯೊಂದು ಕಾಯಿಲೆಗೂ ಬೇರೆ ಜಿಲ್ಲೆಯನ್ನೆ ಅವಲಂಭಿಸಿಕೊಳ್ಳಬೇಕಾಗಿದೆ.ಇದಕ್ಕೆ ಇದುವರೆಗೆ ಈ ಜಿಲ್ಲೆಯನ್ನ ಆಡಳಿದ ಜನಪ್ರತಿನಿಧಿಗಳೇ ಕಾರಣ ಎಂದು ಜನ ನಿತ್ಯವೂ ಝರಿಯುತ್ತಿರುವುದು ಸುಮ್ಮನೆ ಅಲ್ಲ.ನಾನು ಅಷ್ಟು ವರ್ಷ ಈ ಜಿಲ್ಲೆ ಆಳಿದೆನ್ನೇ. ಇಷ್ಟು ವರ್ಷ ಜಿಲ್ಲೆ ಆಳಿದೆ ಎಂದು ಹೇಳಿಕೊಂಡರೆ ಏನು ಪ್ರಯೋಜನ, ಜನರ ಯಾವ ಸಮಸ್ಯೆಗೆ ಧ್ವನಿಯಾಗಿದ್ದೀರಾ.ಎಂದು ಜನ ಪ್ರಶ್ನಿಸುವುದರಲ್ಲಿ ತಪ್ಪೆನಿದೆ.ಇದುವರೆಗೆ ಜನಪ್ರತಿನಿಧಿ ಆದವರು,ಇಷ್ಟು ವರ್ಷ ಜಿಲ್ಲೆ ಹಾಗೂ ಆಯಾ ಕ್ಷೇತ್ರ ಆಳಿದ ಮಾಹಾನುಬಾವರು ಜನರಿಗಾಗಿ ಏನಾದರೂ ಒಳ್ಳೆ ಕೆಲಸ ಮಾಡಿರುವ ಉದಾರಣೆ ಇದ್ದರೆ ಈ ಜಿಲ್ಲೆಯ ಜನ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇಂದು ಎದುರಾಗುತ್ತಿರಲಿಲ್ಲ..
ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ಬಗ್ಗೆ ದಶಕದಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಚುನಾವಣೆ ಎದುರಾದಾಗ ಮಾತ್ರ ಜನರ ಕಿವಿಗೆ ಸರಿಯಾಗಿ ಹೂವನ್ನ ಇಟ್ಟು ಜಿಲ್ಲೆಯ ಜನರ ಮಂಗನಾಗಿ ಮಾಡುತ್ತಿರುವುದು ಬಿಟ್ಟರೆ ಜನಪ್ರತಿನಿಧಿಗಳು ಎಂದು ಕರೆಸಿಕೊಳ್ಳುವವರಿಂದ ಏನು ಸಾಧ್ಯವಾಗಿದೆ.? ಇನ್ನೂ ಸಾರಿಗೆ ವ್ಯವಸ್ಥೆ ನೋಡಿದರೆ ಸಂಪೂರ್ಣವಾಗಿ ಹಳ್ಳಹಿಡಿದು ಹೋಗಿದೆ.ಜಿಲ್ಲಾ ಕೇಂದ್ರ ಕಾರವಾರದಿಂದ ರಾತ್ರಿ 8ಗಂಟೆ ನಂತರದಲ್ಲಿ ಕರಾವಳಿ ಭಾಗಕ್ಕೆ ಹೋಗಬೇಕು ಅಂದರೆ ಬಸ್ ಸಂಚಾರವೇ ಇಲ್ಲ. ಹೊರ ಜಿಲ್ಲೆಗಳಿಂದ ಬರುವ ಬಸ್‌ಗಾಗಿಯೇ ಕಾಯಬೇಕು. ಒಂದು ವೇಳೆ ಆ ಬಸ್ ಬರದೆ ಇದ್ದರೆ ಬಸ್‌ನಿಲ್ದಾಣದಲ್ಲಿಯೇ ರಾತ್ರಿ ಕಾವಲುಗಾರರಾಗಿ ಕಾಲಕಳೆಯುವುದು ಗ್ಯಾರಂಟಿ
ಇನ್ನೂ ಜಿಲ್ಲೆಯ ಮಧ್ಯವರ್ತಿ ಸ್ಥಳ ಎಂದು ಕರೆಯಲಾಗುವ ಕುಮಟಾ ಬಸ್‌ನಿಲ್ದಾದಲ್ಲಿ ಇನ್ನೊಂದು ಕಥೆ.ಇಲ್ಲಿ ಸಹ ರಾತ್ರಿ 8ಗಂಟೆಯ ಮೇಲೆ ಗೋಕರ್ಣ ಭಾಗಕ್ಕೆ ಹೋಗುವ ಪ್ರಯಾಣಿಕರು ಏನಾದರೂ ಕುಮಟಾ ಬಸ್‌ನಿಲ್ದಾಣಕ್ಕೆ ಬಂದರೆ ಬಸ್‌ನಿಲ್ದಾಣದಲ್ಲೇ ಗೋಕರ್ಣವನ್ನ ಕಾಣಬೇಕು. 8ಗಂಟೆ ಬಳಿಕ ಕುಮಟಾ ಡಿಪೋದಿಂದ ತೆರಳುವ ಬಸ್ ಏನಾದರೂ ತಪ್ಪಿ ಹೋದರೆ ಪಕ್ಕದ ಮಂಗಳೂರು ಇಲ್ಲವೆ ಉಡುಪಿ ಜಿಲ್ಲೆಯಿಂದ ಬರುವ ಬಸ್‌ನ್ನೆ ಕಾಯಬೇಕು.ಬಸ್ ನಿಲ್ದಾದಲ್ಲಿ ನೂರಾರು ಪ್ರಯಾಣಿಕರಿದ್ದರು ಕೂಡ ಕುಮಟಾ ಡಿಪೋದಿಂದ ಯಾವುದೇ ಬಸ್ ಬಿಡುವ ಪದ್ದತಿ ಇಲ್ಲವೇ ಇಲ್ಲ. ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳನ್ನ ಕೇಳಿದ್ದರೆ. ಉಡುಪಿ, ಮಂಗಳೂರು ಕಡೆಯಿಂದ ಬಸ್ ಬರಲಿದೆ. ನಮ್ಮಿಂದ 8ಗಂಟೆ ನಮ್ಮ ಡಿಪೋದಿಂದ ಬಸ್ ಬಿಡುವ ಪದ್ದತಿ ಇಲ್ಲ ಎಂದು ಹೇಳುತ್ತಿದ್ದಾರೆಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಇನ್ನೂ ಜನಪ್ರತಿನಿಧಿಗಳ ಬಳಿ ಅನೇಕರು ಅನೇಕ ಭಾರಿ ಬಸ್ ಸಮಸ್ಯೆ ಹೇಳಿಕೊಂಡಿದ್ದಾರೆ. ಆದರೆ ಅವರು ಸಹ ಈ ವಿಚಾರದಲ್ಲಿ ಅಷ್ಟಾಗಿ ಕಾಳಜಿ ವಹಿಸಿರುವಂತೆ ಕಾಣತ್ತಾ ಇಲ್ಲ. ಜನಪ್ರತಿನಿಧಿಯಾದವರು ಸರಿಯಾಗಿ ಕೆಲಸ ಮಾಡಿದ್ದರೆ.ಇಷ್ಟ ಹೊತ್ತಿಗಾಗಲೇ ಜನ ಸಮಸ್ಯೆ ಇದೆ ಎಂದು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆಯ ಬೇಕಾದ ಸಮಯ ಎದುರಾಗತ್ತಾ ಇರಲಿಲ್ಲ.ಚುನಾವಣೆ ದಿನ ತಮ್ಮಗೆ ಮತ ಹಾಕಿಸಿಕೊಳ್ಳುವುದಕ್ಕಾಗಿ ಮನೆ ಮೆನೆ ಬಾಗಿಲಿಗೆ ವಾಹನ ಕಳುಹಿಸಿ ಕರೆತಂದು ಮತ ಹಾಕಿಸಿಕೊಳ್ಳುವ ರಾಜಕಾರಣಿಗಳು ಗೆದ್ದ ಮೇಲೆ ಆ ಮತದಾರ ಮನೆ,ಊರಿಗೆ ಒಂದು ಸಾರಿಗೆ ಬಸ್ ಆದರೂ ಹೋಗುತ್ತಿದೇಯಾ ಎಂದು ಸಹ ಆಲೋಚನೆ ಮಾಡಿದಂತೆ ಕಾಣುತ್ತಿಲ್ಲ. ಸಮಸ್ಯೆ ಹೇಳಿಕೊಂಡರು ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಇಂದಿಗೂ ಸಮಸ್ಯೆಯಲ್ಲೆ ಕಾಲಕಳೆಯಬೇಕಾಗಿದೆ ಅಷ್ಟೆ..ಈರೀತಿ ನಾಟಕ ಕಂಪನಿಯ ರಾಜಕಾರಣಿಯನ್ನ ಗೆಲ್ಲಿಸಿ ಏನು ಪ್ರಯೋಜನ ಅಂತಾ ಜನ ಈಗ ಆಡಿಕೊಳ್ಳುವಂತಾಗಿದೆ.
ಗಮನಿಸಿ