ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ:
ನಾನು ಯಾವುದೇ ಮೀನುಗಾರರ ವಿರೋಧಿಯಲ್ಲ,ನನಗೆ ಎಲ್ಲಾ ಮೀನುಗಾರು ಒಂದೆ. ನಮ್ಮ ರಾಜ್ಯದಲ್ಲಿ ಬೆಳಕು ಮೀನುಗಾರಿಕೆ (LightFishing) ನಿಷೇಧ ಮಾಡಿದರೆ ಬೇರೆ ರಾಜ್ಯದವರು ಇಲ್ಲಿಗೆ ಬಂದು ಬೆಳಕು‌ ಮೀನುಗಾರಿಕೆ ನಡೆಸುತ್ತಾರೆ.ಬೆಳಕು ಮೀನುಗಾರಿಕೆ‌ ನಿಷೇಧ ನಮ್ಮ‌ರಾಜ್ಯಕ್ಕೆ‌ ಮಾತ್ರ ಸಿಮಿತವಾಗಬಾರದು, ದೇಶದಲ್ಲಿ ನಿಷೇಧ ಮಾಡಬೇಕು ಎನ್ನುವುದು ನನ್ನ ಉದ್ದೇಶವೆಂದು ಹೇಳುವ ಮೂಲಕ ತಾನು ಮೀನುಗಾರರ ಪರ ಇದ್ದೇನೆ ಎನ್ನುವುದನ್ನ ಸಚಿವ ಮಂಕಾಳ್ ವೈದ್ಯ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. .

ಬೆಳಕು ಮೀನುಗಾರಿಕೆ ವಿಚಾರವಾಗಿ ರಾಜ್ಯದಲ್ಲಿ ಕೇಳಿ ಬರುತ್ತಿರುವ ಉಹಾಪೊಹಾಗಳ ವಿಷಯಕ್ಕೆ ಸಂಬಂಧಿಸಿ ರಾಜ್ಯ ಪರ್ಷಿನ್ ಬೋಟ್ ಮೀನುಗಾರರ ಯೂನಿಯನ್‘ನವರ ಜೊತೆ ಭಟ್ಕಳದ ಸಚಿವ ಕಚೇರಿಯಲ್ಲಿ ಸಭೆಯಲ್ಲಿ ಮೀನುಗಾರರ‌ ಮುಖಂಡರು ತಮ್ಮ‌ ನಿಲುವಿನ ಬಗ್ಗೆ ಮೀನುಗಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಾಡಡೋಣಿ, ಪರ್ಷಿನ್ ಬೋಟ್, ಫಿಶಿಂಗ್ ಬೋಟ್ ಮೀನುಗಾರರು ಹಾಗೂ ಟ್ರಾಲ್ ಬೋಟ್, ಸಣ್ಣ ಪುಟ್ಟ ಮೀನುಗಾರರು ಅವರ ಅವರಿಗೆ ಅನುಕೂಲವಾಗುವ ಹಾಗೆ ಮೀನುಗಾರಿಕೆಯನ್ನು ನಡೆಸಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆಂದು ಮೀನುಗಾರ ಮುಖಂಡರು‌ ತಿಳಿಸಿದ್ದರು.

ಇದು ಆಗಬೇಕೆಂದರೆ ಕರಾವಳಿಯ ಎಲ್ಲ ಬಿಜೆಪಿ ಸಂಸದರು ಒಟ್ಟಾಗಿ ನಾನು ಕೂಡಾ ಅವರ ಜೊತೆಯಾಗಿ ಕೇಂದ್ರದ ಬಿಜೆಪಿ ಮೀನುಗಾರಿಕೆ ಮಂತ್ರಿಗಳನ್ನು ಭೇಟಿಯಾಗಿ ದೇಶದಲ್ಲೇ ಬೆಳಕು ಮೀನುಗಾರಿಕೆ ನಿಷೇದ ಮಾಡಬೇಕು ಎಂದು ಮನವಿ ಸಲ್ಲಿಸಲು ಸಿದ್ದನಿದ್ದೇನೆ. ಮೀನುಗಾರಿಕೆ ಅಭಿವೃದ್ಧಿ ಪಡೆಸಬೇಕು ಎನ್ನುವುದು ನನ್ನ ಗುರಿ. ಮೀನುಗಾರರಿಕೆಗೆ ತೊಂದರೆಯಾಗುವ ಯಾವ ಯೋಜನೆಗಳನ್ನು ನಮ್ಮ ಸರಕಾರ ನಮ್ಮ ಇಲಾಖೆ ಜಾರಿಗೆ ತರುವುದಿಲ್ಲ.ಆದರೆ ಕೆಲ ರಾಜಕೀಯ ಹಿತಾಶಕ್ತಿಗಳು ಬೆಳಕು ಮೀನುಗಾರಿಕೆ ವಿಚಾರವಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಉಹಾಪೋಹಗಳಿಗೆ ಮೀನುಗಾರರು ಯಾವುದೇ ರೀತಿಯ ಕಿವಿ ಕೊಡದೆ ತಮ್ಮ ಮೀನುಗಾರಿಕೆಯನ್ನು ನಡೆಸಿಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.

ಗಮನಿಸಿ