ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬರ್ಗಿಯಲ್ಲಿ ನೆಲೆಸಿರುವ ಶ್ರೀ ಯಜಮಾನ ದೇವರ ಕಲಾಭಿವೃದ್ಧಿ ಕಾರ್ಯಕ್ರಮ ಡಿಸೆಂಬರ್ 17ರಿಂದ 19ರ ತನಕ ಮೂರು ದಿನಗಳ ಕಾಲ ನಡೆಯಲಿದೆ.
ಇತ್ಯಾದಿ ವಿವಿಧ ಧಾರ್ಮಿಕ ಪೂಜಾವಿಧಿಗಳನ್ನು ಹಳದೀಪುರದ ಪ್ರಸಿದ್ಧ ಜೈನ ಪುರೋಹಿತರಾದ ಶ್ರೀ ವಸಂತ ದೀಪಣ್ಣ ಶೆಟ್ಟಿ ಇವರ ನೇತೃತ್ವದಲ್ಲಿ ನೆರವೇರಿಸಲಾಗುವುದು
ಮೊದಲ ದಿನ ಡಿ, 17ರಂದು ಮಂಗಳವಾರ ಬೆಳಗ್ಗೆ 9-30 ರಿಂದ : ಪ್ರಾರ್ಥನೆ, ಪುಣ್ಯಾಹವಾಚನ, ಕಂಕಣಬಂಧ, ತೋರಣ ಮುಹೂರ್ತ, ಧ್ವಜಾರೋಹಣ, ಅಖಂಡ ದೀಪಸ್ಥಾಪನೆ. ಸಾಯಂಕಾಲ: ವಾಸ್ತು ಹವನ, ಗ್ರಾಮ ಸಂಪ್ರೋಕ್ಷಣೆ, ಬಲಿ ನಡೆಯಲಿದೆ ಇನ್ನೂ ಮಾರನೇ ದಿನ ಡಿ, 18ರಂದು ಬುಧವಾರ ಬೆಳಿಗ್ಗೆ : ಬಿಂಬಶುದ್ಧಿ ಹವನ, ಸಾಯಂಕಾಲ : ಕಲಾವೃದ್ಧಿ, ನವಚಂಡಿ ಹವನ, ಭೂತಬಲಿ ನಡೆಯಲಿದ್ದು, ಕೊನೆ ದಿನವಾದ 19 ಗುರುವಾರ ಬೆಳಿಗ್ಗೆ ಪಂಚಾಮೃತಾಭಿಷೇಕ, ಕ್ಷೇತ್ರಪಾಲ ಆರಾಧನೆ, ಪೂರ್ವಾಹ್ನ 11-30 ಘಂಟೆಗೆ ಪೂರ್ಣಾಹುತಿ, ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ.ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯುವುದು
ಈ ವಿಶೇಷ ದೇವತಾ ಕಾರ್ಯಕ್ರಮಕ್ಕೆ ಭವಗದ್ಭಕ್ತರಾದ ತಾವು ಕುಟುಂಬ ಸಮೇತ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ,ತೀರ್ಥ-ಪ್ರಸಾದ ಸ್ವೀಕರಿಸುವಂತೆ ಶ್ರೀ ಬೀರದೇವತಾ ಸೇವಾ ಸಮಿತಿ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮದ ಮುಖಂಡರು ಸರ್ವರನ್ನ ಸ್ವಾಗತಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಡಿ. 19ರಂದು ರಾತ್ರಿ ಯಕ್ಷಗಾನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ…
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು