ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಉತ್ತರಕನ್ನಡ ಜಿಲ್ಲಾದ್ಯಂತ ನಡೆಯುತ್ತಿದ್ದ ಓಸಿ-ಮಟ್ಕಾ ದಂಧೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಬ್ರೆಕ್ ಹಾಕಿದ್ದು, ಅವರ ಪರಿಶ್ರಮದಿಂದ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಓಸಿ ದಂಧೆ ಬಂದ್ ಆಗಿರುವುದು ಕಂಡು ಬರುತ್ತಿದೆ.ಆದರೆ ಸತ್ಯಾಗ್ರಹದ ತವರೂರು.ಕರ್ನಾಟಕದ ಬಾರ್ಡೊಲಿ ಎಂದು ಕರೆಯಲ್ಪಡುವ ಹಾಗೂ ಕರಿ ಈಸಾಡ”ಗೆ(ಮಾವಿನ ಹಣ್ಣು) ಅತ್ಯಂತ ಪ್ರಸಿದ್ದಿ ಪಡೆದ ಈ ಅಂಕೋಲೆಯಲ್ಲೀಗ ಓಸಿ ದಂಧೆ ಈಸಾಡ ಹಣ್ಣಿಗಿಂತ ಪ್ರಸಿದ್ದಿ ಪಡೆದುಕೊಳ್ಳುತ್ತಿದೆ…
ಅಕ್ಕ-ಪಕ್ಕದ ತಾಲೂಕಿನಲ್ಲಿ ಸಹ ಓಸಿ ದಂಧೆ ಬಂದ್ ಆಗಿದೆ, ಹೀಗಾಗಿ ಸುತ್ತಮುತ್ತಲಿರುವ ತಾಲೂಕಿನ ಹತ್ತಾರು ಹಳ್ಳಿಯ ಜನ ಕೂಡ ಈ ಓಸಿ ಆಟಕ್ಕಾಗಿ ಅಂಕೋಲಾವನ್ನೆ ಅವಲಂಭಿಸಿಕೊಂಡಿದ್ದಾರೆನ್ನಲಾಗಿದೆ. ಇಲ್ಲಿನ ಪೊಲೀಸರ ನೆರಳಲ್ಲೇ ಜನರಿಂದ ಹಣ ಸಂಗ್ರಹಿಸಿ ದಂಧೆ ನಡೆಸುತ್ತಿದ್ದಾರೆ ಎನ್ನುವ ಬಹುದೊಡ್ಡ ಆರೋಪ ಕೇಳಿಬರುತ್ತಿದ್ದು, ಇದಕ್ಕೆಲ್ಲಾ ಪೊಲೀಸರ ಕೃಪಾಕಟಾಕ್ಷ ನೀಡುತ್ತಿದ್ದಾರೆಂಬ ಗಂಭೀರ ಆರೋಪ ಇದೀಗ ಕೇಳಿ ಬರುತ್ತಿದೆ.ಇನ್ನೂ ಅಂಕೋಲಾ ಸುತ್ತಮುತ್ತ ವ್ಯಾಪಕವಾಗಿ ಓಸಿ ದಂಧೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ಎಸ್ಪಿ ಎಂ ನಾರಾಯಣ ಅವರು ಕಳೆದ ಒಂದು ವಾರದ ಹಿಂದಷ್ಟೆ ಓಸಿ ಮಟ್ಕಾ ಹತೋಟಿಗೆ ತರುವಂತೆ ಠಾಣೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಸಹ ನೀಡಿದ್ದಾರೆ ಎನ್ನಲಾಗಿದೆ.
ನೋಟಿಸ್ ಪಡೆದ ಬಳಿಕವಾದರೂ ಓಸಿ ಬುಕ್ಕಿಗಳಿಗೆ ಎಚ್ಚರಿಕೆ ನೀಡಿ ದಂಧೆಗೆ ಕಡಿವಾಡ ಹಾಕಬೇಕಾದವರು ಯಾವುದೇ ಕ್ರಮ ಜರುಗಿಸದೆ ಸುಮ್ಮನಾಗಿದ್ದಾರೆ ಎನ್ನುವುದಕ್ಕೆ ಅಂಕೋಲಾ ಸುತ್ತಮುತ್ತ ರಾಜಾರೋಷವಾಗಿ ನಡೆಯುತ್ತಿರುವ ಓಸಿ ದಂಧೆಯೆ ಸಾಕ್ಷಿಯಾದಂತಿದೆ. ಹೀಗಾಗಿ ಅಂಕೋಲಾದಲ್ಲಿ ನಡೆಯುತ್ತಿರುವ ಓಸಿ ಮಟ್ಕಾ ದಂಧೆ ನಿಯಂತ್ರಣಕ್ಕಾಗಿ ಖುದ್ದು ಜಿಲ್ಲಾ ಪೊಲೀಸ್ ಅಧಿಕಾರಿಗಳೆ ಫೀಲ್ಡ್‌ಗೆ ಇಳಿಯಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ ಅಂಕೋಲಾದ ಪ್ರಜ್ಞಾವಂತ ನಾಗರಿಕರು..
ಗಮನಿಸಿ
- Road Accident/ಸ್ಕೂಟಿ ಸವಾರನ ತಲೆಯ ಮೇಲೆ ಚಲಿಸಿದ ಬಸ್ ; ಸ್ಥಳದಲ್ಲೇ ಸಾವು
- ರಸ್ತೆ ಬದಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ : ಶಿರಸಿ ತಾಲೂಕಿನ ಖಾನನಗರದಲ್ಲಿ ಅಪರೂಪದ ದೃಶ್ಯ.!
- ಕುಮಟಾ ಎಸಿ ಅವರ ಕಾರಿಗೆ ಡಿಕ್ಕಿ ಹೊಡೆದ ಶ್ರೀಕುಮಾರ ಬಸ್
- ಸಮಾಜ,ಧಾರ್ಮಿಕ ಸಂಘಟನೆಗಾಗಿ ಡಾ. ಡಾ. ವೆಂಕಟೇಶ ನಾಯ್ಕ ನೇಮಕ: ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿ
- ಭಟ್ಕಳದಲ್ಲಿ ವಿಚಿತ್ರ ಹೆಣ್ಣು ಶಿಶು ಜನನ,ಆಸ್ಪತ್ರೆಗೆ ದಾಖಲು