ಸುದ್ದಿಬಿಂದು ಬ್ಯೂರೋ ವರದಿ
Kumta: ಕುಮಟಾ: ಶಾಸಕ ದಿನಕರ ಶೆಟ್ಟಿ ಮನೆಯಲ್ಲಿಯೇ ಕಳ್ಳತನವಾಗಿದ್ದು, ಶಾಸಕರ ಮನೆ ಬಳಿ ಸಹಾಯ ಕೇಳಿಕೊಂಡು ಬಂದ ಮಹಿಳೆಯೋರ್ವಳು ಮನೆಯೊಳಗಿನ ಕಪಾಟಿನಲ್ಲಿದ್ದ ಬರೋಬ್ಬರಿ 80 ಸಾವಿರ ರೂ. ನಗದನ್ನು ಎಗರಿಸಿದ ಘಟನೆ ನಡೆದಿದೆ.

ಕುಮಟಾ ಪಟ್ಟಣದ ಕೊಪ್ಪಳಕರ ವಾಡಿಯಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿಯೇ ಕಳುವಾಗಿದೆ. ಶಾಸಕರ ಮನೆ ಬಳಿ ಸಹಾಯ ಕೇಳಿಕೊಂಡ ಬಂದ ಹೊನ್ನಾವರ ಮೂಲದ ಮಹಿಳೆಯೋರ್ವಳು ಮನೆಯೊಳಗಿನ ಕಬೋಡ್‌ನಲ್ಲಿದ್ದ ಬರೋಬ್ಬರಿ 80 ಸಾವಿರ ರೂ ನಗದನ್ನು ಕಳುವು ಮಾಡಿ ಪರಾರಿಯಾಗಿದ್ದಾಳೆ. ಆಗಾಗಾ ಶಾಸಕರ ಮನೆಗೆ ಸಹಾಯ ಕೇಳಿಕೊಂಡು ಬರುತ್ತಿದ್ದಳು ಎನ್ನಲಾದ ಮಹಿಳೆ ಶಾಸಕ ಮನೆಯಲ್ಲಿ ಎಲ್ಲಿ ಹಣ ಇರತ್ತೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಶಾಸಕರು ಮನೆಯಲ್ಲಿರುವಾಗಲೇ ಸಹಾಯ ಕೇಳುವ ನೆಪದಲ್ಲಿ ಶಾಸಕರ ಮನೆಯೊಳಗೆ ತೆರಳಿದ ಮಹಿಳೆ ಯಾರ ಗಮನಕ್ಕೂ ಬಾರದಂತೆ ಕಬೋಡ್ ಒಳಗಿದ್ದ 80 ಸಾವಿರ ರೂ. ನಗದನ್ನು ಎಗರಿಸಿ, ಅಲ್ಲಿಂದ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಶಾಸಕರ ಗಮನಕ್ಕೆ ಬರುತ್ತಿದ್ದಂತೆ ಕೆಂಡಮಂಡಲಾದ ಶಾಸಕರು ಮನೆಯಲ್ಲಿದ್ದವರ ಮೇಲೆಲ್ಲ ರೇಗಾಡಿದ್ದಾರಂತೆ. ಬಳಿಕ ಶಾಸಕರ ಆಪ್ತ ಸಹಾಯಕ ಕುಮಟಾ ಪೊಲಿಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ ಬಳಿಕ ಪೊಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಆ ಮಹಿಳೆಯನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗುತ್ತಿದ್ದು, ಅದನ್ನ ಪೊಲೀಸರೆ ಖಚಿತ ಪಡಿಸಬೇಕಿದೆ. ಈ ವಿಚಾರ ಗುಪ್ತವಾಗಿಡಲಾಗಿದ್ದರೂ ಮಾಧ್ಯಮಗಳಿಗೆ ಬಲ್ಲಮೂಲಗಳಿಂದ ತಿಳಿದುಬಂದಿದೆ.

ಗಮನಿಸಿ