ಸುದ್ದಿಬಿಂದು ಬ್ಯೂರೋ ವರದಿ
Gokarna:ಗೋಕರ್ಣ: ಸಮುದ್ರದಲ್ಲಿ ಈಜಲು ಹೋಗಿದ್ದ ಇಬ್ಬರು ಪ್ರವಾಸಿಗರು ಸಮುದ್ರದಲ್ಲೆಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಮಿಡ್ಲ್ ಬೀಚ್ ಬಳಿ ನಡೆದಿದೆ.
ಬೆಂಗಳೂರು ಮೂಲದ ಪ್ರತೀಕ ಪಾಲಕ್ಷಪ್ಪ(33) ವಿಜಯನಗರ ಬೆಂಗಳೂರು,ರವಿ (30) ಬೆಂಗಳೂರು ಮೃತ ಪ್ರವಾಸಿಗರಾಗಿದ್ದಾರೆ.ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆಂದು 15ಮಂದಿ ಸ್ನೇಹಿತರು ಸೇರಿಕೊಂಡು ಪ್ರವಾಸಕ್ಕೆ ಬಂದಿದ್ದರು. ಇದರಲ್ಲಿ ಇಬ್ಬರೂ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಅಲೆಗೆ ಸಿಲುಕಿ ಮೃತ ಪಟ್ಟಿದ್ದಾರೆ.
ಪ್ರವಾಸಿಗರು ಅಪಾಯಕ್ಕೆ ಸಿಲುಕಿರುವುದನ್ನ ಕಂಡ ಅಲ್ಲಿನ ಲೈಪ್ ಗಾರ್ಡ್ ಸಿಬ್ಬಂದಿಗಳು ತಕ್ಣಣ ದಾವಿಸಿದ್ದರಾದರು. ಅಷ್ಟರಲ್ಲಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಇಬ್ಬರ ಮೃತ ದೆಹವನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ದಡಕ್ಕೆ ತಂದಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ
- ಯಲ್ಲಾಪುರದಲ್ಲಿ ನಾಗರಿಕತೆ ತಲೆತಗ್ಗಿಸಿದ ಕ್ರೂರ ಹತ್ಯೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಶಾಸಕ ಶಿವರಾಮ ಹೆಬ್ಬಾರ್ ಆಗ್ರಹ
- ಅಕ್ರಮ ಸಂಬಂಧ ಶಂಕೆ : ಹಾಡುಹಗಲೇ ಕಾಳಮ್ಮ ನಗರದಲ್ಲಿ ವಿವಾಹಿತ ಮಹಿಳೆಯ ಭೀಕರ ಕೊಲೆ
- ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸಚಿವ ಮಂಕಾಳ್ ವೈದ್ಯರ ಭರವಸೆ :ಸ್ಪರ್ಶ ಆಸ್ಪತ್ರೆಗೆ ಭೇಟಿ
- Murudeshwar/ಮುರುಡೇಶ್ವರ ಸಮುದ್ರದಲ್ಲಿ ಭಾರೀ ಅಲೆಗೆ ಸಿಲುಕಿದ್ದ ಬೆಳಗಾವಿ ಪ್ರವಾಸಿಗನ ರಕ್ಷಣೆ: ಲೈಫ್ಗಾರ್ಡ್ಗಳ ಸಾಹಸಮಯ ಕಾರ್ಯಾಚರಣೆ


