ಸುದ್ದಿಬಿಂದು ಬ್ಯೂರೋ ವರದಿ
Kumta : ಕುಮಟಾ: ಜಮ್ಮೀರ್ ಉಲ್ಲಾಖಾನ್ ಏನಾದ್ರೂ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಕಾಲಿಟ್ಟಿದ್ದು ಹೌದಾದರೆ ಅವರನ್ನ ಜಿಲ್ಲೆಯಿಂದ ದಿಕ್ಕಾಪಾಲಾಗಿ ಓಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ‌ ಶೆಟ್ಟಿ ಅವರು ಅನಂತಕುಮಾರ ಹೆಗಡ ಶೈಲಿಯಲ್ಲಿಯೇ‌ ಗುಡಗಿದ್ದಾರೆ
.

ವಕ್ಫ್ ವಿಚಾರವಾಗಿ ಬಿಜೆಪಿ ಇಂದು ರಾಜ್ಯಾದಂತ್ಯ ಪ್ರತಿಭಟನೆ ಹಮ್ಮಿಕೊಂಡಿತ್ತು.ಅದೆ ರೀತಿ ಕುಮಟಾದಲ್ಲೊಯೂ ಸಹ ಬಿಜೆಪ ಪ್ರತಿಭಟನೆ ನಡೆಸಿದೆ. ಮನವಿ ನೀಡಲು ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮತನಾಡಿದ ಶಾಸಕ‌ ದಿನಕರ‌‌‌ ಶೆಟ್ಟಿ ಈ‌ ಕಾಂಗ್ರೇಸ್ ಸರಕಾರದಲ್ಲಿ ನಮ್ಮ ಬಡ ರೈತರ ಜಮೀನು ವಕ್ಪ್ ವಶವಾಗಿದೆ ಎಂದು ಪಹಣಿ ಪತ್ರಿಕೆಯಲ್ಲಿ ನಮೂದಾಗಿದೆ. ಇದನ್ನ ಆಗೋದಕ್ಕೆ ನಾವು ಯಾವತ್ತು ಬಿಡೋದಿಲ್ಲ .

ಈ ವಿಚಾರವಾಗಿ ಜಮ್ಮೀರ್ ಖಾನ್ ಹಿಂದೂಗಳ ವಿರೋಧಿ ಪರ ಮಾತ್ನಾಡುತ್ತಿದ್ದಾರೆ. ಅವರಿಗೆ ನಿಜವಾಗಲ್ಲೂ ತಾಕತ್ ಇದ್ರೆ ಉತ್ತರ ಕನ್ನಡ ಜಿಲ್ಲೆಗೆ ಕಾಲಿಡಲಿ ಎಂದು ಶಾಸಕ ದಿನಕರ ಶೆಟ್ಟಿ ಜಮೀರ್ ಖಾನ್ ಅವರಿಗೆ ಸವಾಲೆಸೆದಿದ್ದಾರೆ. ನಾವೇಲ್ಲರೂ ಒಬ್ಬ ದುಷ್ಟ ಜಮೀರ್ ಅವರನ್ನು ಓಡಿಸಲು ಕೈಜೋಡಿಸಬೇಕು, ರೈತರ ಜಮೀನುಗಳಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಡಿಸುತ್ತಿರುವ ಜಮೀರ್‌ ಒಬ್ಬ ದುಷ್ಟ, ಇಂಥ ಸಚಿವನ ಮೂಲಕ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವೇ? ಎಂದ ಶಾಸಕ ದಿನಕರ ಶೆಟ್ಟಿ ಸಿಎಂ ಅವರನ್ನು ಸಿದ್ದರಾಮುಲ್ಲಾಖಾನ್ ಎಂದು ಟೀಕಿಸಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್‌‌‌ ಕ್ಲಿಕ್ ಮಾಡಿ