ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಗೋವಾದಿಂದ‌ ಕೇರಳಕ್ಕೆ ವಾಟರ್ ಪಿಲ್ಟರ್‌ ಸಾಗಿಸುತ್ತಿದ್ದ. ಲಾರಿ ಚಾಲಕನ ಮೇಲೆ ಮಾಜಾಳಿಯ ಅಂತರಾಜ್ಯ ಚೆಕ್ ಪೊಸ್ಟ್‌ನ ಕರ್ತವ್ಯ ನಿರಂತ ಸಿಬ್ಬಂದಿ ಓರ್ವ ದೌರ್ಜನ್ಯ ಎಸೆಗಿರುವುದಾಗಿ ಲಾರಿ ಚಾಲಕ ಆರೋಪಿಸಿದ್ದಾನೆ.

ಕಾರವಾರದ ಮಾಜಾಳಿ ಗೋವಾ ಮತ್ತು ಕರ್ನಾಟಕದ ನಡುವೆ ಗಡಿಯಲ್ಲಿದೆ‌. ಪ್ರತಿನಿತ್ಯ ಸಾವಿರಾರು ಸರಕು ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಈ ಮಾರ್ಗವಾಗಿ ಕರ್ನಾಟಕ ಹಾಗೂ ಗೋವಾ ಪ್ರವೇಶ ಮಾಡುತ್ತಿರುತ್ತಾರೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಸೇರಿದಂತೆ ಅಕ್ರಮ ತಡೆಗಟ್ಟು ಗಡಿಯಲ್ಲಿ ತಪಾಸಣೆ ಮಾಡಲಾಗುತ್ತದೆ.ಆದರೆ ಎಷ್ಟೆ ತಪಾಸಣೆ ಮಾಡಿದ್ದರು ಗೋವಾದ ಮದ್ಯ ಕರ್ನಾಟಕ್ಕೆ ಪ್ರವೇಶ ಮಾಡುವುದು ತಪ್ಪಿಸಲು ಸಾಧ್ಯವಾಗಿಲ್ಲ.

ಅದೆಷ್ಟೋ ವಾಹನಗಳಲ್ಲಿ ಅಕ್ರಮ ಗೋವಾ ಮದ್ಯಗಳು ಕರ್ನಾಟದಕ ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಅನೇಕ ಬೀದಿ ಬದಿ ಅಂಗಡಿಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿರುವುದು ಸಂಬಂಧಿಸಿದಿ ಅಧಿಕಾರಿಗಳಿಗೆ ಗೊತ್ತಿರದ ವಿಚಾರವೇನು ಅಲ್ಲ.‌ಅಷ್ಟೆ ಅಲ್ಲದೆ ಕಳೆದ‌ ಕೆಲ ತಿಂಗಳ ಹಿಂದಷ್ಟೆ ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವ ಕಾರಿನಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುವ ವೇಳೆ ಗೋಕರ್ಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರ ಎಲ್ಲರಿಗೂ ತಿಳಿದೆ ಇದೆ.

ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಇದ್ದರೂ ಸುಮ್ಮನಾಗಿರುವ ಕರ್ತವ್ಯ ನಿರಂತ ಸಿಬ್ಬಂದಿಗಳು ಮದ್ಯವೆ ಸಾಗಾಟ ಮಾಡದೆ ಇದ್ದವರನ್ನೂ ಸಹ ಕೆಲವೊಮ್ಮೆ ಪೀಡಿಸುತ್ತಾರೆ ಎನ್ನುವ ಬಗ್ಗೆ ಸಾರ್ವಜನಿಕರು ಆರೋಪಿಸುತ್ತಿದ್ದರು. ಇದಕ್ಕೆಲ್ಲಾ ಸಾಕ್ಷಿ ಎನ್ನುವಂತೆ ಮಂಡ್ಯದ ಕುಮಾರ ಎಂಬಾತ ಲಾರಿಯಲ್ಲಿ ಗೋವಾದಿಂದ ಕೇರಳಕ್ಕೆ ವಾಟರ್ ಪಿಲ್ಟರ್ ಸಾಗಿಸುತ್ತಿದ್ದ ಎಲ್ಲಾಗಿದ್ದು, ಈ ವೇಳೆ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಓರ್ವ‌ ಆತನ ಲಾರಿ ತಡೆದು ಪಿಡಿಸಿರುವುದಲ್ಲೇ ದೌರ್ಜನ್ಯ ಎಸೆಗಿದ್ದಾರೆಂದು ಲಾರಿ ಚಾಲಕ ಕುಮಾರ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ..