suddibindu.in
ಗೋಕರ್ಣ; ಅಗಸ್ಟ್ 29 ರಂದು ಸರ್ಕಾರಿ ಪ್ರೌಢಶಾಲೆ ನಾಡುಮಾಸ್ಕೇರಿಯ ಮೈದಾನದಲ್ಲಿ ನಡೆದ ಹನೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಿಮೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಗಂಡು ಮಕ್ಕಳ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ತಿಲಕ ಲಕ್ಷ್ಮಣ ಗೌಡ ದ್ವಿತೀಯ, 200 ಮೀ. ಓಟದಲ್ಲಿ ತಿಲಕ ಲಕ್ಷ್ಮಣ ಗೌಡ ಪ್ರಥಮ, 400 ಮೀ. ಓಟದಲ್ಲಿ ಪರೀತ ಹನುಮಂತ ಗೌಡ ಪ್ರಥಮ, ಮಯೂರ ನಾಗೇಂದ್ರ ಗೌಡ ದ್ವಿತೀಯ, 600 ಮೀ. ಓಟದಲ್ಲಿ ನಂದೇಶ ರಾಘವೇಂದ್ರ ಆಗೇರ ಪ್ರಥಮ, ಎತ್ತರ ಜಿಗಿತದಲ್ಲಿ ರಮಾನಂದ ಮಾಬ್ಲು ಗೌಡ ದ್ವಿತೀಯ, ಚಕ್ರ ಎಸೆತದಲ್ಲಿ ವಿಘ್ನೇಶ ಮಂಕಾಳಿ ಗೌಡ ಪ್ರಥಮ, ಗುಂಡು ಎಸೆತದಲ್ಲಿ ವಿಘ್ನೇಶ ಮಂಕಾಳಿ ಗೌಡ ದ್ವಿತೀಯ. ಉದ್ದ ಜಿಗಿತದಲ್ಲಿ ತಿಲಕ ಲಕ್ಷ್ಮಣ ಗೌಡ ತೃತೀಯ
ಗುಂಪು ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಖೋಖೋ ಪ್ರಥಮ, 4×100 ಮೀ. ರಿಲೇ ದ್ವಿತೀಯ, ಕಬ್ಬಡ್ಡಿ ದ್ವಿತೀಯ
ಹೆಣ್ಣು ಮಕ್ಕಳ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ವರ್ಷಾ ಸೋಮಶೇಖರ ನಾಯ್ಕ ಪ್ರಥಮ, 400 ಮೀ. ಓಟದಲ್ಲಿ ಅನೀಶಾ ಚಂದ್ರು ಆಗೇರ ಪ್ರಥಮ, 600 ಮೀ. ಓಟದಲ್ಲಿ ಆಶಿತಾ ಸಂತೋಷ ಆಗೇರ ದ್ವಿತೀಯ, ಉದ್ದ ಜಿಗಿತದಲ್ಲಿ ವರ್ಷಾ ಸೋಮಶೇಖರ ನಾಯ್ಕ ತೃತೀಯ.
ಹೆಣ್ಣು ಮಕ್ಕಳ ಗುಂಪು ವಿಭಾಗದಲ್ಲಿ ಕಬ್ಬಡ್ಡಿಯಲ್ಲಿ ಪ್ರಥಮ, ಖೋ ಖೋ ದಲ್ಲಿ ಪ್ರಥಮ, 4×100 ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಹನೇಹಳ್ಳಿ ಕ್ಲಸ್ಟರ್ ನ ಒಟ್ಟು 10 ಶಾಲೆಗಳು ಸ್ಪರ್ಧೆಯಲ್ಲಿದ್ದವು. ಗುಂಪು ವಿಭಾಗದಲ್ಲಿ ಒಟ್ಟು 4 ತಂಡಗಳು, ವೈಯಕ್ತಿಕ ವಿಭಾಗದಲ್ಲಿ ಒಟ್ಟು 11 ವಿದ್ಯಾರ್ಥಿಗಳು ಸಪ್ಟೆಂಬರ್ 3 ರಂದು ನಡೆಯಲಿರುವ ಗೋಕರ್ಣ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಮಕ್ಕಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ರಾಜೀವ ಎಂ. ಗಾಂವಕರ ರವರು ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಾಧ್ಯಾಪಕರಾದ ಉಮಾ ಜಿ. ನಾಯ್ಕ, ಶಾಲಾ ಶಿಕ್ಷಕ ವೃಂದದವರು, SDMC ಅಧ್ಯಕ್ಷರು & ಸದಸ್ಯರು ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ