suddibindu.in
ಅಂಕೋಲಾ :ಆ್ಯಸಿಡ್ ತುಂಬಿದ ಟ್ಯಾಂಕರ್ ಚಲಿಸುತ್ತಿದ್ದ ವೇಳೆ ಬಳಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ಕಂಚಿನಬಾಗಿಲು ಬಳಿ ನಡೆದಿದೆ.
ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ. ಆಂಧ್ರಪ್ರದೇಶದಿಂದ ಗೋವಾಕ್ಕೆ ತೆರಳುತ್ತಿದ್ದ ಟ್ಯಾಂಕರ್ ಕಂಚಿನಬಾಗಿಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್ ಚರಂಡಿಗೆ ಬಿದ್ದಿದೆ.
ಟ್ಯಾಂಕರ್ ನಲ್ಲಿ ಸುಮಾರು 34 ಟನ್ ಸಲ್ಪುರಿಕ್ ಆ್ಯಸಿಡ್ ಒಯ್ಯಲಾಗುತಿತ್ತು. ಘಟನೆಯಿಂದ ಚರಂಡಿಯಲ್ಲಿ ಸಂಪೂರ್ಣವಾಗಿ ಆ್ಯಸಿಡ್ ಸೋರಿಕೆಯಾಗಿ ಖಾಲಿಯಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಇದನ್ನೂ ಓದಿ