suddibindu.in
ಧರ್ಮಸ್ಥಳ : ಸೌಜನ್ಯ ಅತ್ಯಾಚಾರ ಕೊಲೆ (Sowjanya Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಶುಕ್ರವಾರ ಮಹತ್ವದ ತೀರ್ಪು ನೀಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅರ್ಜಿಗಳನ್ನು ಹೈಕೋರ್ಟ್(High Court) ವಜಾಗೊಳಿಸಿದೆ.

ಸೌಜನ್ಯ ಕೊಲೆಯಾಗಿ 12 ವರ್ಷ ಆದರೂ ಇಂದು ನ್ಯಾಯ ಸಿಕ್ಕಿಲ್ಲ. ಈ ಹಿಂದೆ ನಡೆದ ತನಿಖೆಗಳಲ್ಲಿ ಸೌಜನ್ಯಗಳಿಗೆ ಸರ್ಕಾರದ ಅಂಗ ಸಂಸ್ಥೆಗಳೇ ಅನ್ಯಾಯ ಮಾಡಿದ್ದವು. ಹೀಗಾಗಿ ಸೌಜನ್ಯ ಮರು ತನಿಗೆ ಮಾಡಬೇಕು ಎನ್ನುವ ಹಕ್ಕೋತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ

ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ,ಪ್ರಕರಣದ ಮರುತನಿಖೆ ಕೋರಿ ಸೌಜನ್ಯ ಪೋಷಕರು ಸಲ್ಲಿಸಿದ್ದ ಅರ್ಜಿ ಹಾಗೇ ಆರೋಪಿ ಸಂತೋಷ್ ರಾವ್ ಅಕ್ರಮ ಬಂಧನಕ್ಕೆ ಪರಿಹಾರ ಕೋರಿದ್ದ ಅರ್ಜಿ ಈ ಮೂರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೋರ್ಟ್ ನೀಡಿರುವ ಆದೇಶ ಸೌಜನ್ಯ ಹೋರಾಟಗಾರರಿಗೆ ತುಸು ನಿರಾಸೆ ಮೂಡಿಸಿದೆ.

ಈ ಮೂಲಕ ಚಂದಪ್ಪಗೌಡ, ಸಂತೋಷ್ ರಾವ್, ಸಿಬಿಐ ಈ ಮೂವರು ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿದೆ. ಇನ್ನು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಇದನ್ನೂ ಓದಿ