ಬಳ್ಳಾರಿ : ರೇಣುಕಾಸ್ವಾಮಿ ‌ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಟ ದರ್ಶನ್‌ಗೆ ಅಲ್ಲಿನ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ಹಿನ್ನಲೆಯಲ್ಲಿ ದರ್ಶನ್‌ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲ್‌ನಿಂದ ಹೊರಟು ಬೆಳಗ್ಗೆ 10-15ರ ಸುಮಾರಿಗೆ ದರ್ಶನ್‌ ಕೈಗೆ ಕೋಳ ತೊಡಿಸಿ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಕರೆತರಲಾಯಿತು. ದರ್ಶನ್‌ಗೆ ಕೈದಿ ಸಂಖ್ಯೆ 511 ನೀಡಲಾಗಿದೆ ಅಂತ ತಿಳಿದುಬಂದಿದೆ. ದರ್ಶನ್ ಜತೆಗೆ ಇತರೆ ಆರೋಪಿಗಳನ್ನೂ ಏಕಕಾಲದಲ್ಲಿ ಬೇರೆ ಜೈಲ್‌ಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ