suddibindu.in
Kumta:ಕುಮಟಾ :ತಾಲೂಕಿನ ಕಿಮಾನಿ ಸಮೀಪದ ಗುಂದ ಗ್ರಾಮದ ಬಳಿ ಅಘನಾಶಿನಿ ನದಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಗುರುತು ಪತ್ತೆಯಾಗಿದೆ.

ಮೃತ ಮಹಿಳೆ ಕುಮಟಾ ತಾಲೂಕಿನ ಸಾಂತಗಲ್‌ ನಿವಾಸಿ ಶಿಲ್ಪಾ ರಮೇಶ ನಾಯ್ಕ (45) ಎಂದು ಗುರುತಿಸಲಾಗಿದೆ. ಈಕೆ ಕಳೆದ ಎರಡು ದಿನಗಳ ಹಿಂದೆ ಕುಮಟಾ ಸರಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯವರ ಬಳಿ ಹೇಳಿ ಹೋದವಳು ವಾಪಸ್‌ ಮನೆಗೂ ಬಾರದೆ, ಆಸ್ಪತ್ರೆಗೂ ಹೋಗದೆ ನಾಪತ್ತೆಯಾಗಿದ್ದಳು.‌ನಾಪತ್ತೆ ಬಳಿಕ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರು ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ.ನಂತರದಲ್ಲಿ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕುಮಟಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಇಂದು ಬೆಳಿಗ್ಗೆ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದಾ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಶವ ಪತ್ತೆಯಾದ ಬಳಿಕ ಪೊಲೀಸರು ಆಕೆಯ ಕುಟುಂಬಸ್ಥರನ್ನ ಕರೆಸಿ ಪರಿಶೀನೆ ನಡೆಸಿದ ವೇಳೆ ಅಘನಾಶಿನಿ ನದಿಯಲ್ಲಿ ಪತ್ತೆಯಾಗಿವ ಮಹಿಳೆ ಶವ ಶಿಲ್ಪಾ ನಾಯ್ಕ ಅವಳದ್ದೆ ಎಂಬುದನ್ನ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. ಗೋಕರ್ಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ