ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚಿತ್ರನಟ ದರ್ಶನ, ಸಂಗಡಿರೊಂದಿಗೆ ಜೈಲಿನಲ್ಲಿ ಬಿಂದಾಸ್ ಆಗಿ ಕುಳಿತಿರುವ ಪೋಟೊವೊಂದು ವೈರಲ್ ಆಗಿದ್ದು ರಾಜ್ಯಾದ್ಯಂತ ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಅಲ್ಲಿ ಕುಳಿತಿರುವ ದರ್ಶನ್ ಬಲಗೈಯಲ್ಲಿ “ಮಗ್” ಹಿಡಿದುಕೊಂಡಿದ್ದರೆ, ಎಡಗೈಯಲ್ಲಿ ಹೇಗೆ ಸಿಗರೇಟ್ ಹಿಡಕೊಂಡಿದ್ದಾನೆ ನೋಡಿ. ಇದೀಗ ಕಾರಾಗೃಹದಲ್ಲಿ ಕೂತಿರುವ ನಟ ದರ್ಶನ ಅವರ ಪೋಟೊ ವೈರಲ್ ಮಾಡಿದ್ದು ಯಾರೂ ಎಂಬ ಪ್ರಶ್ನೆ ಮೂಡಿದ್ದು, ಇದರ ಹಿಂದೆ ಏನಿರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ