suddibindu.in
KARWAR : ಕಾರವಾರ : ನಗರದ ಗಾಂಧಿ ಮಾರ್ಕೆಟ್‌ನಲ್ಲಿ ತೆರವು ಮಾಡಲಾಗಿದ್ದ ಮಣ್ಣನ್ನ ತೆರವು ವಿಚಾರಕ್ಕೆ ಸಂಬಂಧಿಸಿ ನಗರ ಸಭೆಯ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿನ ಉಂಟಾಗಿದೆ.
ಕಾರವಾರ ನಗರದ ಗಾಂಧಿ ಮಾರುಕಟ್ಟೆಯಲ್ಲಿ (Gandhi Market)ಇದ್ದ ಹಳೆಯದಾಗಿದ್ದ ಕಟ್ಟಡವನ್ನ ಈ ಹಿಂದೆ 2020 ಫೆಬ್ರವರಿಯಲ್ಲಿ ಇಲ್ಲಿನ ಹಳೆಯ ಕಟ್ಟವನ್ನ ತೆರವು ಮಾಡಲಾಗಿತ್ತು. ಆದರೆ ತೆರವು ಮಾಡಲಾಗಿದ್ದ ಕಟ್ಟಡ ಮಣ್ಣನ್ನ ಬೇರೆ ಕಡೆ ಸ್ಥಳಾಂತರ ಮಾಡದೆ ಹಾಗೆ ಅಲ್ಲೆ ಇಡಲಾಗಿತ್ತು.ಅಂಗಡಿಗಳು ತೆರವಾದರೂ ಸಹ ಅದರ ಕಲ್ಲು,ಮಣ್ಣುಗಳನ್ನ ಬೇರೆಡೆ ಸ್ಥಳಾಂತರ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ಆ ಮಣ್ಣುಗಳು ರಸ್ತೆಯ ಪಕ್ಕದಲ್ಲಿನ ಗಟಾರಗಳನ್ನ ತುಂಬಿಕೊಂಡು ಸಮಸ್ಯೆ ಉಂಟಾಗುತ್ತಿತ್ತು.
ಇದನ್ನೂ ಓದಿ
- ಅಕ್ರಮ ದಂಧೆಕೋರರರ ಪರ ನಿಂತ ಕನ್ನಡ ಪರ ಸಂಘಟನೆ ಅಧ್ಯಕ್ಷ : PSI ಎತ್ತಂಗಡಿಗೆ ಸಂಚು
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
ಹೀಗಾಗಿ ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆ ಬಳಿಕ ಇಂದು ರಾಶಿಯಾಗಿ ಬಿದ್ದಿದ್ದ ಮಣ್ಣನ್ನ ಬೇರೆಡೆ ಸ್ಥಳಾಂತರ ಮಾಡಲು ಮುಂದಾಗಲಾಗಿತ್ತು. ಆದರೆ ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಬಗ್ಗೆ ನಗರಸಭೆಯ ಸದಸ್ಯರ ಸಭೆಯಲ್ಲಿ ಯಾವುದೇ ಠರಾವು ಮಾಡದೆ ಏಕಾಏಕಿಯಾಗಿ ಮಣ್ಣು ತೆರವು ಮಾಡಲು ಸಾಧ್ಯವಿಲ್ಲವೆಂದು ನಗರಸಭೆಯ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದರು, ಈ ವೇಳೆ ಎರಡು ಪಕ್ಷದ ಸದ್ಯರ ನಡುವೆ ಕೆಲ ಸಮಯ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಸದ್ಯ ಮಣ್ಣು ತೆರವು ಮಾಡುವುದನ್ನ ಅರ್ಧಕ್ಕೆ ಬಿಡಲಾಗಿದೆ.