www.suddibindu.in
ಹಳಿಯಾಳ: ತಾಲೂಕಿನ ಕೆಸರೋಳ್ಳಿ ಗ್ರಾಮದ ಸರ್ವೆ ನಂಬರ್ 66ಬ/ 35ರಲ್ಲಿ ಜಾಗೆಯನ್ನು ಹಿಂದೂ ಸ್ಮಶಾನಕ್ಕೆ ನೀಡಬೇಕೆಂದು ಒತ್ತಾಯಿಸಿ ಕೆಸರೊಳ್ಳಿ ಗ್ರಾಮಸ್ಥರು ಪ್ರತಿಭಟನೆ ನಾಡುವ ಮೂಲಕ ಮನವಿ ಸಲ್ಲಿಸಿದರು.

ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ ಕೆಸರೋಳ್ಳಿ ಗ್ರಾಮಸ್ಥರು ಹಿಂದೂ ಸ್ಮಶಾನ ಭೂಮಿಯನ್ನ ಮಂಜೂರಿ ಮಾಡಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸುನಿಲ ಹೆಗಡೆ ಹಾಗೂ ಸಮತಾ ಸೈನಿಕ ದಳ ಡಾ. ಅಂಬೇಡ್ಕರ ವಾದ ಸಂಘಟನೆಯ ನೇತೃತ್ವದಲ್ಲಿ ಕೆಸರೋಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಶಿರಸ್ತೆದಾರ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ

ಕೆಸರೋಳ್ಳಿ ಗ್ರಾಮದ ಹಿಂದೂ ಸಮಾಜದವರು ಕಳೆದ 25 ವರ್ಷದಿಂದ ಸರ್ವೇ 66ರಲ್ಲಿ ಹಿಂದೂ ಸ್ಮಶಾನ ಅಂತ ಬಳಕೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಈ ಜಾಗವನ್ನ ದಾಖಲೆಯಲ್ಲಿ ಸ್ಮಶಾನ ಭೂಮಿ‌ ಎಂದು ದಾಖಲು ಮಾಡಬೇಕೆಂದು ಅನೇಕ ವರ್ಷಗಳಿಂದ ಕೇಳುತ್ತಲೆ ಬರಲಾಗಿದೆ. ಆದರೆ ಇದುವರಗೆ ಹಾಗೆ ಉಳಿದುಕೊಂಡಿದೆ.ಈ ಬಗ್ಗೆ ಅಧಿಕಾರಿಗಳನ್ನ‌ ಕೇಳಿದೆ 35ಗುಂಟೆ ಸಾರ್ವಜನಿಕ ಸ್ಮಶಾನ ಇದೆ ಹಾಗಾಗಿ ಮಂಜೂರು ಮಾಡಲು ಆಗುವುದಿಲ್ಲ ಎಂದು ಸಬಬೂ ಹೇಳುತ್ತಾರೆ

ಅಧಿಕಾರಿಗಳ ಇಂತಹ ಹೇಳಿಕೆಯಿಂದ ಹಿಂದೂ,ಮುಸ್ಲಿಂ, ಕ್ರೈಸ್ತ ಸಮಾಜದವರು ಅಲ್ಲಿ ವಾಸಿಸುತ್ತಿರುವುದರಿಂದ ಅವರಲ್ಲಿ ಭಾವೈಕ್ಯತೆ ಒಡೆದು ಗಲಭೆಗಳು ಸಂಭವಿಸುವ ಸಾಧ್ಯತೆ ಇದೆ ಆದ್ದರಿಂದ ಹಿಂದೂಗಳು ಸ್ಮಶಾನಕ್ಕಾಗಿ ಬಳಸುವ ಜಾಗ ಮಂಜೂರಿ ಮಾಡಬೇಕೆಂದು ಕೆಸರೊಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ,‌ ಕೆಸರೋಳ್ಳಿ ಗ್ರಾಮ ಪಂಚಾಯತ ಸದಸ್ಯ ಡೊಂಗ್ರು ಕೇಸರೇಕರ್, ಸಮತಾ ಸೈನಿಕದಳ ಡಾ,ಅಂಬೇಡ್ಕರ ವಾದ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಕಲಬಾವಿ, ತಾಲೂಕಾ ಅಧ್ಯಕ್ಷ ಗಣೇಶ ರಾಠೋಡ, ಗಿರಿಜಾ ರಾಮ ಅಳವಣಕರ, ಡೋಂಗ್ರು ಜುವೆಕರ್, ಪರಶುರಾಮ ಕರಗಸಕರ, ಉಮರ ಖಾನ ಮುಕ್ತೆ ಸರ್, ದಿಗಲು ಸೋಜ್, ನಾಸಿರ ಖಾನ ಮುಕ್ತೆ ಸರ್, ಆನಂದ ಗುಡಗೇರಿ, ಮಿನಿನ್ ಸೋಜ್, ಹಾಗೂ ಕೆಸರೋಹಳ್ಳಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.