suddibindu.in
Kumta: ಕುಮಟಾ : ಐಆರ್ಬಿ ಕಂಪನಿಯ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಕಳೆದ ತಿಂಗಳು ಸುರಿದ ರಣಭೀಕರ ಮಳೆಗೆ ಬರ್ಗಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತವಾಗಿ ಒಂದು ತಿಂಗಳಾದರೂ ಇರುವರಗೆ ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣನ್ನು ತೆರವು ಮಾಡದೆ ಬಿಟ್ಟಿರುವ ಕುರಿತು, ವಾಹನ ಸವಾರರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಶಿರೂರು ಗುಡ್ಡಕುಸಿತವಾದ ಸಮಯದಲ್ಲೇ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡಕುಸಿತ ಉಂಟಾಗಿ ಒಂದು ಬದಿಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಘಟನೆ ನಡೆದು ಒಂದು ತಿಂಗಳು ಕಳೆದರು ಇದುವರೆಗೆ ಮಣ್ಣು ತೆರವು ಮಾಡದೆ ಹಾಗೆ ಬಿಡಲಾಗಿದೆ. ಘಟನೆ ಬಳಿಕ ಹೆದ್ದಾರಿಯಲ್ಲಿ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ
- ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ : ನಾಮ ಪತ್ರ ಸಲ್ಲಿಸಿದ ಸರಸ್ವತಿ ಎನ್. ರವಿ
- ಕೇವಲ 48 ಗಂಟೆಗಳಲ್ಲಿ ಅಂತರ್ಜಿಲ್ಲಾ ಕಳ್ಳರ ಬಂಧಿಸಿದ ಕುಮಟಾ ಪೊಲೀಸರು
- ಮದುವೆ ರಿಸೆಪ್ಷನ್ನಲ್ಲಿ ಪಾರ್ಕಿಂಗ್ ವಿವಾದ: ಭಟ್ಕಳದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ,
ಅಂಕೋಲಾ ಕಡೆಯದ ಕುಮಟಾ ಕಡೆಗೆ ಬರುವ ವಾಹನ ಸವಾರರು ಇನ್ನೊಂದು ಬದಿಯ ಹೆದ್ದಾರಿಗೆ ವಾಹನ ತೆಗೆದುಕೊಳ್ಳುವುದು ಅಪಾಯಕಾರಿಯಾಗಿಗೆ. ಈ ವೇಳೆ ಕುಮಟಾ ಕಡೆಯಿಂದ ಅಂಕೋಲಾ ಕಡೆ ಸಂಚರಿಸುವ ವೇಳೆ ಹೆದ್ದಾರಿ ಇಳಿ ಮುಖವಾಗಿರುವ ಕಾರಣ ಈ ಮಾರ್ಗದಲ್ಲಿ ಬರುವ ಎಲ್ಲಾ ವಾಹನಗಳಿ ಅತಿವೇಗವಾಗಿ ಚಲಿಸುತ್ತವೆ.
ಈ ವೇಳೆ ಅಂಕೋಲಾ ಕಡೆಯಿಂದ ಬರುವ ವಾಹನ ಸವಾರರು ಯೂರ್ಟನ್ ತೆಗೆದುಕೊಂಡರೆ ಭಾರೀ ದೊಡ್ಡ ಮಟ್ಟದ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಇನ್ನೂ ಹೆದ್ದಾರಿಯಲ್ಲಿ ನಾಮಫಲಕ ಹಾಕಿದ್ದರು ಸಹ ಆ ಸ್ಥಳದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ಸಮಯದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಹೆದ್ದಾರಿಯಲ್ಲಿ ಬೆರಳಣಿಕೆಯಷ್ಟು ವಿದ್ಯುತ್ ದೀಪಗಳನ್ನ ಅಳವಡಿಸಲಾಗಿದ್ದು, ಇನ್ನೂ ಹತ್ತಾರು ಕಂಬಗಳನ್ನ ತಂದು ಅಳವಡಿಸದೆ ಹಾಗೆ ತುಕ್ಕುಹಿಡಿಯವಂತೆ ಇಡಲಾಗಿದೆ.
ಅವಘಡ ಸಂಬಂವಿಸುವ ಮೊದಲು ಇನ್ನೂ ಹೆಚ್ಚಿನ ವಿದ್ಯುತ್ ದೀಪಗಳನ್ನ ಅಳವಡಿಸಬೇಕಿದೆ. ಅಲ್ಲದೆ ತಿಂಗಳುಗಳಿಂದ ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣು ತೆರವು ಮಾಡುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ.