suddibindu.in
Karwar: ಕಾರವಾರ : ಶಿರೂರು ಗುಡ್ಡಕುಸಿತವಾಗಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು,ಈ ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (national highway sauthority)ಮತ್ತು ಐ.ಆರ್. ಬಿ ಕಂಪನಿ ಚಥುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವ ಸಮಯದಲ್ಲಿ ಸರಿಯಾಗಿ ಅಧ್ಯಯನ ನಡೆಸದೆ ಅವೈಜ್ಞಾನಿಕವಾಗಿ ಚತುಷ್ಪಧ ಕಾಮಗಾರಿಯನ್ನ ಮಾಡಿರುವುದೇ ಶಿರೂರು ಗುಡ್ಡಕುಸಿತ ದುರಂತಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಸಚಿವಾಲಯ (Central Forest Ministry) ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದಿಂದ ದಾಖಲೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ
- ಇಂದಿನ ರಾಶಿಫಲ ಹಾಗೂ ನಿತ್ಯದ ಪಂಚಾಂಗ
- ಮಗನಿಗೆ ಬಾತ್ರೂಮ್ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ
- ಕಾಂಡ್ಲಾ ವನಗಳು ಸಾಗರ ತೀರಗಳ ರಕ್ಷಾ ಕವಚ: ಎ.ಸಿ.ಎಫ್ ಕೃಷ್ಣೇ ಗೌಡ
ಗುಡ್ಡಕುಸಿತವಾದ ಬಳಿಕ ಶಿರೂರು ಭಾಗದಲ್ಲಿ ಸರ್ವೆ ನಡೆಸಿದ ಜಿಯಾಲಾಜಿಕಲ್ ಸರ್ವೆ ಆಪ್ ಇಂಡಿಯಾ ವರದಿಯನ್ನ ನೀಡಿದೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಹಸಿರು ಪೀಠ ಹೆದ್ದಾರಿ ಕಾಮಗಾರಿಯನ್ನ ಆರಂಭಿಸುವ ಮೊದಲು ಅಲ್ಲಿನ ಸ್ಥಳದ ಬಗ್ಗೆ ಅಧ್ಯಯನ ಮಾಡಿ ಕಾಮಗಾರಿ ನಡೆಸಬೇಕಿತ್ತು. ಆದರೆ ಈ ಹೆದ್ದಾರಿ ಕಾಮಗಾರಿ ಕೈಗೆತ್ತುಕೊಳ್ಳುವ ಮೊದಲು ಯಾವುದೇ ರೀತಿಯಲ್ಲಿ ಅಧ್ಯಯನ ನಡೆಸದೆ ಕಾಮಗಾರಿ ಮಾಡಿರುವಂತಿದೆ. ಈ ಮೂಲಕ ಪರಿಸರ ಕಾಯ್ದೆಯನ್ನ ಉಲ್ಲಂಘನೆ ಮಾಡಲಾಗಿದೆ ಎನ್ನುವ ಬಗ್ಗೆ ಅಭಿಪ್ರಾಯಪಟ್ಟಿದೆ.
ಹೆದ್ದಾರಿ ಕಾಮಗಾರಿ ವೇಳೆ ಹಂತ ಹಂತವಾಗಿ ಗುಡ್ಡಗಳನ್ನ ಕೊರೆದು ಕಾಮಗಾರಿ ಮಾಡಬೇಕು. ಇಲ್ಲದೆ ಹೋದರೆ ಮಳೆಗಾಲದ ಸಮಯದಲ್ಲಿ ಗುಡ್ಡ ಕುಸಿತ ಉಂಟಾಗಲಿದೆ ಎಂದು ಮೊಲದೆ ತಜ್ಞರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಎಲ್ಲವನ್ನೂ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಗುಡ್ಡಕೊರೆದು ಕಾಮಗಾರಿ ಕೈಗೊಂಡಿದೆ. ಹೀಗಾಗಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ ಎಂದು ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.







