suddibindu.in
ಭಾರತ ಸೇರಿದಂತೆ ವಿದೇಶದ ಪ್ರಮುಖ ಮಾರುಕಟ್ಟೆಯಲ್ಲಿ ವೀಕೆಂಡ್‌ನಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಹೆಜ್ಜೆಯಿಟ್ಟಿದೆ.
ಅಂತರಾಷ್ಟ್ರೀಯ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬಲಿಷ್ಠ ಖರೀದಿ ಕಂಡುಬಂದಿದ್ದು, ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಎರಡು ವಾರಗಳಲ್ಲಿ ಕುಸಿತಗೊಂಡಿದ್ದ ಚಿನ್ನದ ಬೆಲೆ ಮತ್ತೆ ಇದೀಗ ಏರು ಮುಖದತ್ತ ಸಾಗಿದೆ.ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ $2,507 ಡಾಲರ್ ತಲುಪಿದ್ದು, ಹೊಸ ಹಂತಕ್ಕೆ ಸಹ ಏರಿತ್ತು. ಪ್ರತಿ ಔನ್ಸ್ $2500 ಗಡಿ ದಾಟಿದ ಬಳಿಕ ವಾರದಲ್ಲಿ 3.13 ಪರ್ಸೆಂಟ್ ಏರಿಕೆ ಕಂಡಿದೆ.ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ಬೆಲೆ 10 ಗ್ರಾಂ 71,395 ರೂಪಾಯಿ ತಲುಪಿದೆ. ವಾರದಲ್ಲಿ 2.12 ಪರ್ಸೆಂಟ್ ಏರಿಕೆಗೊಂಡಿದೆ.
ಇದನ್ನೂ ಓದಿ
- ಕಾರವಾರ ದೇವಭಾಗ ಬೀಚ್ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯಲ್ಲೂ ಸಹ ಏರಿಕೆ ಕಾಣಬಹುದು. ಎಂಸಿಎಕ್ಸ್ ಬೆಳ್ಳಿ ಬೆಲೆಯು ವಾರದಲ್ಲಿ 3.31 ಪರ್ಸೆಂಟ್ ಏರಿಕೆಗೊಂಡಿದ್ದು, ಕೆಜಿಗೆ 83,213 ರೂಪಾಯಿ ಮುಟ್ಟಿದೆ. ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 5.67 ಪರ್ಸೆಂಟ್ ಹೆಚ್ಚಾಗಿ ಪ್ರತಿ ಔನ್ಸ್‌ಗೆ $29 ಡಾಲರ್ ಮುಟ್ಟಿದೆ.
ದೆಹಲಿ : 84,100 ರೂಪಾಯಿ, ಬೆಂಗಳೂರು : 84,100 ರೂಪಾಯಿಚೆನ್ನೈ : 89,100 ರೂಪಾಯಿ ಮುಂಬೈ : 84,100 ರೂಪಾಯಿ ಕೋಲ್ಕತ್ತಾ : 84,100 ರೂಪಾಯಿ,ಕೇರಳ : 89,100 ರೂಪಾಯಿ,ಪಾಟ್ನಾ : 84,100 ರೂಪಾಯಿಸೂರತ್ : 84,100 ರೂಪಾಯಿಚಂಡೀಗಢ : 84,100 ರೂಪಾಯಿಲಕ್ನೋ : 84,100 ರೂಪಾಯಿ