suddibindu.in
ಅಂಕೋಲಾ: ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಗಂಗಾವಳಿ ನದಿಯಲ್ಲಿ ಮುಳುಗಡೆಯಾಗಿದ್ದ ಕೇರಳ ಮೂಲದ ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ 28ದಿನಗಳ ಬಳಿಕ ಈಶ್ವರ ಮಲ್ಪೆ ಅವರು ನಡೆಸಿದ ಶೋಧ ಕಾರ್ಯದಲ್ಲಿ ಪತ್ತೆಯಾಗಿದೆ.
ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾಗಿರುವ ಮೂವರು ಹಾಗೂ ಮುಳುಗಡೆಯಾಗಿರುವ ಕೇಳರ ಮೂಲದ ಭಾರತ್ ಬೇಂಜ್ ಲಾರಿಗಾಗಿ ಶೋಧ ಪತ್ತೆಗಾಗಿ ಇಂದು ಸಂಜೆ ಈಶ್ವರ ಮಲ್ಪೆ ಅವರು ನಡೆಸಿದ ಕಾರ್ಯಚರಣೆ ವೇಳೆ ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ ಪತ್ತೆಯಾಗಿದೆ. ಈ ವೀಲ್ ಜಾಕ್ ತನ್ನ ಲಾರಿಯದ್ದೆ ಎಂದು ಲಾರಿ ಮಾಲೀಕ ಸಿಕ್ಕಿರು ವೀಲ್ ಜಾಕ್ ತನ್ನ ಲಾರಿಯದ್ದು ಎನ್ನುವುದನ್ನ ಖಚಿತ ಪಡಿಸಿದ್ದಾರೆ…
ಇದನ್ನೂ ಓದಿ
- ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಆಚರಣೆ
- Prajwal Revanna/ಗ್ರಂಥ ಪಾಲಕನಾಗಿ ಪ್ರಜ್ವಲ್ ರೇವಣ್ಣ ನೇಮಕ
- ಅತ್ಯುತ್ತಮ ಚಾಲಕ ಪ್ರಶಸ್ತಿ ಪುರಸ್ಕೃತ ದೇವರಹಕ್ಕಲದ ಈಶ್ವರ ನಾಯ್ಕ ಇನ್ನಿಲ್ಲ
ಈಶ್ವರ ಮಲ್ಪೆ ತಂದ ಇಂದು ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿದ್ದರು ಆದರೆ ಜಿಲ್ಲಾಡಳಿತದಿಂದ ಕಾರ್ಯಚರಣೆಗೆ ಅನುಮತಿ ಸಿಗದ ಕಾರಣ ಕಾರ್ಯಚರಣೆ ಇಳಿದಿರಲಿಲ್ಲ. ಬಳಿಕ ಸ್ಥಳೀಯ ಶಾಸಕ ಸತೀಶ ಸೈಲ್ ಮುಂದಾಳತ್ವದಲ್ಲಿ ಈಶ್ವರ ಮಲ್ಪೆ ಅವರನ್ನ ಗಂಗಾವಳಿ ನದಿಯಲ್ಲಿ ಕಾರ್ಯಚರಣೆಗ ಇಳಿಸಲಾಗಿತ್ತು. ಈ ವೇಳೆ ಶೋಧ ಕಾರ್ಯ ನಡೆಸಿದ ಈಶ್ವರ ಮಲ್ಪೆ ನದಿಯ ಆಳದಲ್ಲಿ ಮಣ್ಣಿನ ಅಡಿಯಲ್ಲಿದ್ದ ಲಾರಿಯ ವೀಲ್ ಜಾಕ್ ಹೊರತಂದಿದ್ದಾರೆ. ಹೀಗಾಗಿ ಇದೀಗ ಲಾರಿ ಅಲ್ಲೇ ಮಣ್ಣಿನ ಅಡಿಯಲ್ಲಿ ಸಿಲುಕಿರುವುದು ಬಹುತೇಕ ಖಚಿತವಾಗಿದೆ