suddibindu.in
ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತದ ಬೆನ್ನಲ್ಲೇ ಇದೀಗ ಸುಮಾರು 45ವರ್ಷದಷ್ಟು ಹಳೆಯದಾದ ಕಾರವಾರದ ಸದಾಶಿವಘಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು 50 ವರ್ಷಗಳ ಹಿಂದೆ ನಿರ್ಮಿತವಾದ ಕಾಳಿ ಸೇತುವೆ ಕುಸಿದು ಬಿದ್ದು, ಲಾರಿ ಮುಳುಗಡೆಯಾಗಿರುವ ಘಟನೆ ನಡೆದಿದೆ.
ಗೋವಾದಿಂದ ಮಂಗಳೂರು ಕಡೆ ಚಲಿಸುತ್ತಿದ್ದ ಲಾರಿ ಕಾಳಿ ನದಿಯಲ್ಲಿ ಮುಳುಗಡೆಯಾಗಿದ್ದು, ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ರಕ್ಷಣೆ ಎಂಬಾತ ಮುಳುಗಡೆಯಾಗಿದ್ದು, ಆತನ ರಕ್ಷಣೆ ಮಾಡಲಾಗಿದೆ. ಚಾಲಕನ ಸ್ಥಿತಿ ಗಂಭೀರವಾಗಿದೆ. ಸದ್ಯ ಆತನಿಗೆ ಕಾರವಾರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇನ್ನೂ ಎಷ್ಟು ವಾಹನಗಳು ಸಿಲುಕಿಕೊಂಡಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
ಕಾಳಿ ನದಿ ಇತಿಹಾಸ
ಕಾರವಾರದ ಮೂಲಕ ಹರಿಯುವ ಕಾಳಿ ನದಿಗೆ.1983ರಲ್ಲಿ ಈ ನದಿಯ ಮೇಲೆ ನಿರ್ಮಿಸಲಾದ ಸೇತುವೆಯು ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ಸೇತುಗೆ ಇದಾಗಿತ್ತು. ನದಿ ಮತ್ತು ಸಮುದ್ರದ ಸಂಗಮ ಸ್ಥಳದ ಮೇಲೆ ಸೇತುವೆಯನ್ನು ನಿರ್ಮಿಸಿರುವುದರಿಂದ ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ ಸಹ ಆಗಿತ್ತು.ಈ ಸೇತುವೆಯ ಮೇಲೆ ಅನೇಕ ಕನ್ನಡ ಹಾಗೂ ಹಿಂದಿ ಸಿನಿಮಾಗಳು ಸಹ ಚಿತ್ರೀಕರಣ ಮಾಡಲಾಗಿತ್ತು. ನದಿಯು ಸಮುದ್ರವನ್ನು ಸೇರುವ ಸ್ಥಳವು ಸ್ಪಷ್ಟವಾಗಿ ಗೋಚರಿಸುವ ಕೆಲವು ಸ್ಥಳಗಳಲ್ಲಿ ಇದು ಒಂದಾಗಿದೆ.