suddibindu.in
ಕುಮಟಾ : ತಾಲೂಕಿನ ಮಿರ್ಜಾನ ರೈಲ್ವೆ ಮಾರ್ಗದಲ್ಲಿ ಕುಸಿತವಾಗಿದೆ ಎನ್ನುವ ಬರಹವಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನತೆಯಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ರೈಲ್ವೆ ಪ್ರಯಾಣಿಕರು ಸಹ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಇದೇ ರೀತಿ ಶಿರೂರು ಗುಡ್ಡಕುಸಿತವಾದ ಸಮಯಸಲ್ಲಿ ಸಹ ಬರ್ಗಿಯಿಂದ ಮುಗ್ವೆಗಾನ ಸುರಂಗ ಮಾರ್ಗ ನಡುವೆ ಗುಡ್ಡಕುಸಿತವಾಗಿದೆ ಎನ್ನುವ ಪೊಟೋ ಸಹ ವೈರಲ್ ಆಗಿತ್ತು, ಆ ಸಮಯದಲ್ಲಿ ರೈಲ್ವೆ ಮಾರ್ಗದ ಸಮೀಪವೇ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ ಸಹ ಉಂಟಾಗಿತ್ತು.
ಇದನ್ನೂ ಓದಿ
- ಅಧ್ಯಯನಪೂರ್ಣ ವರದಿಗಾರಿಕೆ ಅಗತ್ಯ- ಪತ್ರಕರ್ತರ ಶ್ರಮ ದೊಡ್ಡದು : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
- ಜನಸ್ನೇಹಿ ಪರಿಸರಸ್ನೇಹಿ ‘ಗಣಪ’
- Keni Port/ಕೇಣಿ ಬಂದರು ಅಹವಾಲು ಸಭೆಯಲ್ಲಿ ದಬ್ಬಾಳಿಕೆ – ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಇದರಿಂದಾಗಿ ಅದೆ ಗುಡ್ಡದ ಮಣ್ಣು ಪಕ್ಕದ ರೈಲ್ವೆ ಮಾರ್ಗದ ಮೇಲೆ ಬಿದ್ದಿರ ಬಹುದು ಎಂದು ಅನೇಕರು ನಂಬಿದ್ದರು. ಈಗ ಸಹ ಬೇರೆ ಎಲ್ಲೋ ರೈಲ್ವೆ ಮಾರ್ಗ ಕುಸಿತವಾಗಿರುವ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ಮಿರ್ಜಾನ ಸಮೀಪ ರೈಲ್ವೆ ಮಾರ್ಗದಲ್ಲಿ ಕುಸಿತವಾಗಿದೆ ಎಂದು ಆ ವಿಡಿಯೋದ ಮೇಲೆ ಬರೆದು ವಿಡಿಯೋ ವೈರಲ್ ಮಾಡುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅಧಿಕೃತವಾಗಿ ಮಾಹಿತಿ ನೀಡಿದ್ದು, ಮಿರ್ಜಾನ ಬಳಿ ವಿಡಿಯೋ ವೈರಲ್ ಆಗಿರುವ ರೀತಿಯಲ್ಲಿ ರೈಲ್ವೆ ಮಾರ್ಗ ಕುಸಿತವಾಗಿಲ್ಲ. ಇದು ಸುಳ್ಳುಸುದ್ದಿ ಎಂದು ದೃಢಪಡಿಸಿದ್ದಾರೆ. ಹೀಗಾಗಿ ಈ ವಿಡಿಯೋ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ.