suddibindu.in
ಅಂಕೋಲಾ: ಯಲ್ಲಾಪುರ ಹಾಗೂ ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಕಳೆದ ಎರಡು ತಿಂಗಳಿಂದ ಸರಿಯಾದ ವಿದ್ಯುತ್ ಸರಬರಾಜು ಇಲ್ಲದೆ ಜನ ಬೇಸತ್ತಿದ್ದು,ದುರಸ್ತಿ ಮಾಡುವಂತೆ ಎಚ್ಚರಿಕೆ ನೀಡುತ್ತಾ ಬಂದಿದ್ದರು ಸಹ ಇದುವರೆಗೆ ವಿದ್ಯುತ್ ಸಮಸ್ಯೆ ಬಗೆಹರಿಸದ ಕಾರಣ ಗ್ರಾಮಸ್ಥರು ಹೆಸ್ಕಾಂ ಗ್ರಿಡ್’ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಯಲ್ಲಾಪುರದ ಇಡಗುಂದಿ, ಮಾವಿನಮನೆ ಗ್ರಾಮ ಪಂಚಾಯತ ಗ್ರಾಮಸ್ಥರು ಹಾಗೂ ಅಂಕೋಲಾ ತಾಲೂಕಿನ ಸುಂಕಸಾಳ, ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರು ಒಂದಾಗಿ ಪ್ರತಿಭಟನೆ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ತಿಂಗಳಿಂದ 40ಕ್ಕೂ ಹೆಚ್ಚು ಮಜರೆಗಳಿಲ್ಲ ಮನೆಗಳಿಗೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸುವ ಮೂಲಕ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ದುರುಸ್ಥಿ ಮಾಡುವಂತೆ ಎಷ್ಟೇ ಬಾರಿ ಕೇಳಿಕೊಂಡು ಅಧಿಕಾರಿಗಳು ಆ ಗ್ರಾಮದಲ್ಲಿ ಉಂಟಾಗಿದ್ದ ವಿದ್ಯುತ್ ಸಮಸ್ಯೆಯನ್ನ ಎರಡು ತಿಂಗಳಿಂದ ಬಗೆಹರಿಸಿಲ್ಲ.
ಇದನ್ನೂ ಓದಿ
- ಕಳಪೆ ರಸ್ತೆ ಕಾಮಗಾರಿ ವಿರುದ್ಧ ಸೆ.26ಕ್ಕೆ ಹೆದ್ದಾರಿ ತಡೆದು ಪ್ರತಿಭಟನೆ
- ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಹಿನ್ನಲೆ: ಹೊನ್ನಾವರದ ಗೇರುಸೊಪ್ಪದಲ್ಲಿ ಸಾರ್ವಜನಿಕ ಅಹವಾಲು ಸಭೆ
- ಲಾರಿ-ಬಸ್ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು, ಹಲವರಿಗೆ ಗಾಯ
ಮಳೆಗಾಲ ಪೂರ್ವದಲ್ಲಿ ಲೈನ್ ನಿರ್ವಹಣೆ ಬಗ್ಗೆ ಗಮನಹರಿಸಬೇಕು. ಅಗತ್ಯ ಸಿಬ್ಬಂದಿಯನ್ನು ಈ ಭಾಗಕ್ಕೆ ನೇಮಿಸಬೇಕು.ಗ್ರಾಹಕರ ಸಮಸ್ಯೆ ಆಲಿಸಲು ಯೋಗ್ಯ ಅಧಿಕಾರಿ ಬೇಕು. ಅರಬೈಲ್, ಡಬ್ಬುಳಿ, ಗುಳ್ಳಾಪುರ, ಕೊಡ್ಲಗದ್ದೆ, ಚುಕ್ಕುಮನೆ ಗ್ರಾಮದ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು’ ಇಲ್ಲದೆ ಹೋದರೆ ಮುಂದಿನ ದಿನದಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.